varthabharthi


ಅಂತಾರಾಷ್ಟ್ರೀಯ

100 ಬಿಲಿಯನ್ ಡಾಲರ್ ಗಡಿ ದಾಟಿದ ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಸಂಪತ್ತಿನ ಮೌಲ್ಯ

ವಾರ್ತಾ ಭಾರತಿ : 7 Aug, 2020

ನ್ಯೂಯಾರ್ಕ್: ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರ ಒಟ್ಟು ಸಂಪತ್ತಿನ ಮೌಲ್ಯ ಮೊದಲ ಬಾರಿ ಗುರುವಾರ 100 ಬಿಲಿಯನ್ ಡಾಲರ್ ದಾಟಿದೆ. ಚೀನೀ ಆ್ಯಪ್ ಟಿಕ್ ಟಾಕ್‍ಗೆ ಪರ್ಯಾಯವೆಂದೇ ತಿಳಿಯಲಾದ ರೀಲ್ಸ್  ಆ್ಯಪ್ ಅನ್ನು ಫೇಸ್ ಬುಕ್ ಬಿಡುಗಡೆಗೊಳಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. 

ಝುಕರ್ ಬರ್ಗ್ ಅವರ ಹೆಚ್ಚಿನ ಸಂಪತ್ತು ಫೇಸ್ ಬುಕ್‍ನಲ್ಲಿರುವ ಅವರ ಶೇ. 13ರಷ್ಟು ಪಾಲು ಬಂಡವಾಳದಿಂದ ಬಂದಿದೆ. ಇದೀಗ ಅವರ ಸಂಪತ್ತಿನ ಒಟ್ಟು ಮೌಲ್ಯ 100 ಬಿಲಿಯನ್ ಡಾಲರ್ ಗಡಿ ದಾಟುವುದರೊಂದಿಗೆ ಅವರು ಜೆಫ್ ಬೆಝೋಸ್ ಹಾಗೂ ಬಿಲ್ ಗೇಟ್ಸ್ ಅವರ  ಸಾಲಿನಲ್ಲಿ ಸೇರಿದ್ದಾರೆ.

ಝುಕರ್ ಬರ್ಗ್ ಅವರ ಒಟ್ಟು ಸಂಪತ್ತಿನ ಮೌಲ್ಯ ಈ ವರ್ಷ 22 ಬಿಲಿಯನ್ ಡಾಲರ್ ಹೆಚ್ಚಾಗಿದ್ದರೆ, ಅಮೆಝಾನ್ ಸಿಇಒ ಜೆಫ್ ಬೆಝೋಸ್ ಅವರ ಸಂಪತ್ತು ಈ ವರ್ಷ 75 ಬಿಲಿಯನ್ ಡಾಲರಿಗೂ ಅಧಿಕ ಏರಿಕೆಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)