varthabharthi


ರಾಷ್ಟ್ರೀಯ

ಜಾರಿ ನಿರ್ದೇಶನಾಲಯ ಮುಂದೆ ಹಾಜರಾದ ರಿಯಾ ಚಕ್ರವರ್ತಿ

ವಾರ್ತಾ ಭಾರತಿ : 7 Aug, 2020

 ಹೊಸದಿಲ್ಲಿ/ಮುಂಬೈ, ಆ.7: ಸುಶಾಂತ್ ಸಿಂಗ್ ರಾಜ್‌ಪೂತ್ ಸಾವಿನ ಪ್ರಕರಣದ ತನಿಖೆಯ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಮುಂಬೈ ಕಚೇರಿಗೆ ನಟಿ ರಿಯಾ ಚಕ್ರವರ್ತಿ ಇಂದು ಆಗಮಿಸಿದರು.

ತನ್ನ ಅರ್ಜಿಯು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ ತನ್ನ ವಿಚಾರಣೆಯನ್ನು ಮುಂದೂಡುವಂತೆ ರಿಯಾ ಚಕ್ರವರ್ತಿ ಸಲ್ಲಿಸಿರುವ ಮನವಿಯನ್ನು ಈಡಿ ನಿರಾಕರಿಸಿತು. ಈಡಿ ಬೆಳಗ್ಗೆ 11:30ಕ್ಕೆ ಗಡುವು ನೀಡಿದ ಕಾರಣ ರಿಯಾ ಸರಿಯಾದ ಸಮಯಕ್ಕೆ ವಿಚಾರಣೆಗೆ ಹಾಜರಾದರು. ರಿಯಾ ಅವರ ತಂದೆ ಇಂದ್ರಜಿತ್ ಚಕ್ರವರ್ತಿಹಾಗೂ ಸಹೋದರ ಶೋವಿಕ್ ಬಳಿಕ ಆಗಮಿಸಿದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)