varthabharthi


ಅಂತಾರಾಷ್ಟ್ರೀಯ

ಬೈಡನ್ ವಿರುದ್ಧ ನಾನು ಸೋತರೆ ಚೀನಾ ಸಂತೋಷಪಡುತ್ತದೆ: ಟ್ರಂಪ್

ವಾರ್ತಾ ಭಾರತಿ : 8 Aug, 2020

ನ್ಯೂಜೆರ್ಸಿ (ಅಮೆರಿಕ), ಆ. 8: ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ‘ಯಾವಾಗಲೂ ನಿದ್ರಾವಸ್ಥೆಯಲ್ಲಿರುವ’ ಜೋ ಬೈಡನ್ ವಿರುದ್ಧ  ನಾನು ಸೋತರೆ ಚೀನಾಕ್ಕೆ ಸಂತೋಷವಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

‘‘ಡೊನಾಲ್ಡ್ ಟ್ರಂಪ್, ಯಾವಾಗಲೂ ನಿದ್ರೆಯಲ್ಲಿರುವ ಜೋ ಬೈಡನ್ ವಿರುದ್ಧ ಸೋಲುವ ಚುನಾವಣೆಯನ್ನು ನೋಡಲು ಚೀನಾವು ಸಂತೋಷ ಪಡುತ್ತದೆ. ಅವರು ನಮ್ಮ ದೇಶವನ್ನು ಹೊಂದುವ ಕನಸು ಕಾಣುತ್ತಿದ್ದಾರೆ. ಜೋ ಬೈಡನ್ ಅಮೆರಿಕದ ಅಧ್ಯಕ್ಷರಾದರೆ ಚೀನಾವು ನಮ್ಮ ದೇಶವನ್ನು ಆಳುತ್ತದೆ’’ ಎಂದು ನ್ಯೂಜೆರ್ಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ನಾನು ಸೋಲುವುದನ್ನು ನೋಡಲು ಇರಾನ್ ಕೂಡ ಬಯಸುತ್ತಿದೆ ಎಂಬುದಾಗಿಯೂ ಅವರು ಹೇಳಿದರು. ‘’ನಾನು ಚುನಾವಣೆಯಲ್ಲಿ ಗೆದ್ದರೆ ಇರಾನ್ ಜೊತೆಗೆ ಕ್ಷಿಪ್ರವಾಗಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತೇನೆ’’ ಎಂದರು.

‘‘ನಾವು ಚುನಾವಣೆಯಲ್ಲಿ ಗೆದ್ದರೆ, ನಾವು ಇರಾನ್‌ನೊಂದಿಗೆ ಶೀಘ್ರವಾಗಿ ಒಪ್ಪಂದಗಳನ್ನು ಮಾಡುತ್ತೇವೆ. ನಾವು ಉತ್ತರ ಕೊರಿಯದೊಂದಿಗೂ ಕ್ಷಿಪ್ರವಾಗಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತೇವೆ. ನಾನು 2016ರಲ್ಲಿ ಚುನಾವಣೆಯನ್ನು ಗೆಲ್ಲದಿದ್ದರೆ, ಈಗ ನಮ್ಮ ದೇಶವು ಉತ್ತರ ಕೊರಿಯದೊಂದಿಗೆ ಯುದ್ಧದಲ್ಲಿ ತೊಡಗಿರುತ್ತಿತ್ತು. ವಾಸ್ತವವಾಗಿ, ನಾವು ಉತ್ತರ ಕೊರಿಯದೊಂದಿಗೆ ಬಾಂಧವ್ಯ ಹೊಂದಿದ್ದೇವೆ’’ ಎಂದು ಟ್ರಂಪ್ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)