varthabharthi


ಬೆಂಗಳೂರು

ಜಲಮಂಡಳಿ: ಮೂರು ತಿಂಗಳಲ್ಲಿ 110 ಕೋಟಿ ರೂ. ಬಾಕಿ ಬಿಲ್ ಸಂಗ್ರಹ

ವಾರ್ತಾ ಭಾರತಿ : 9 Aug, 2020

ಬೆಂಗಳೂರು, ಆ.8: ಲಾಕ್‍ಡೌನ್ ಸಡಿಲಿಕೆಯಿಂದ ಜಲಮಂಡಳಿ ಬಾಕಿ ಬಿಲ್‍ನ ಹಣ ಸಂಗ್ರಹದಲ್ಲಿ ಸ್ವಲ್ಪ ಏರಿಕೆ ಕಂಡಿದ್ದು, ಮೂರು ತಿಂಗಳಲ್ಲಿ 110.88 ಕೋಟಿ ರೂ. ಸಂಗ್ರಹವಾಗಿದೆ.

ಪ್ರತಿ ತಿಂಗಳು ಗೃಹ ಬಳಕೆ, ವಾಣಿಜ್ಯ ಕಟ್ಟಡಗಳಿಂದ ಸರಾಸರಿ 110 ರಿಂದ 115 ಕೋಟಿ ರೂ.ಮೊತ್ತ ಸಂಗ್ರಹವಾಗುತ್ತಿತ್ತು. ಆನ್‍ಲೈನ್ ಪಾವತಿಯೂ(ಪ್ರತಿ ತಿಂಗಳು 20 ರಿಂದ 25 ಕೋಟಿ ರೂ.) ಸೇರಿ ಮೂರು ತಿಂಗಳಿಗೆ ಸರಾಸರಿ 345 ಕೋಟಿ ರೂ.ಸಂಗ್ರಹವಾಗುತ್ತಿತ್ತು.

ಕೊರೋನ ಪ್ರಕರಣಗಳು ಹೆಚ್ಚಳದಿಂದಾಗಿ ಲಕ್ಷಾಂತರ ಜನರು ಸ್ವಂತ ಊರಿನತ್ತ ಪ್ರಯಾಣ ಬೆಳೆಸಿದ್ದರಿಂದ ಬಹುತೇಕ ಮನೆಗಳು ಮತ್ತು ವಾಣಿಜ್ಯ ಮಳಿಗೆಗಳು ಖಾಲಿಯಾಗಿವೆ. ಹೀಗಾಗಿ ಮೇನಿಂದ ಜುಲೈನವರೆಗಿನ ಬಾಕಿ ಶುಲ್ಕ ಪಾವತಿಯಲ್ಲಿ ವ್ಯತ್ಯಯವಾಗಿತ್ತು. ಇದೀಗ ತುಸು ಚೇತರಿಕೆ ಕಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)