varthabharthi


ರಾಷ್ಟ್ರೀಯ

ಕೋವಿಡ್ ವಿರುದ್ಧ ಹೋರಾಡಲು 'ಪಾಪಡ್' ಸಹಕಾರಿ ಎಂದಿದ್ದ ಕೇಂದ್ರ ಸಚಿವರಿಗೆ ಕೊರೋನ ಪಾಸಿಟಿವ್

ವಾರ್ತಾ ಭಾರತಿ : 9 Aug, 2020

ಹೊಸದಿಲ್ಲಿ, ಎ.9: "ನನಗೆ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ'' ಎಂದಿರುವ ಕೇಂದ್ರ ಸಚಿವ ಅರ್ಜುನ್ ಸಿಂಗ್ ಮೇಘಾವಾಲ್ ಶನಿವಾರ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
 ಬೃಹತ್ ಕೈಗಾರಿಕೆಗಳು ಹಾಗೂ ಸಂಸದೀಯ ವ್ಯವಹಾರದ ರಾಜ್ಯ ಸಚಿವರಾಗಿರುವ ಮೇಘಾವಾಲ್ ಕೊರೋನ ಲಕ್ಷಣ ಕಾಣಿಸಿಕೊಂಡ ಬಳಿಕ ಎರಡು ಬಾರಿ ಪರೀಕ್ಷೆಗೆ ಒಳಗಾಗಿದ್ದು, ಎರಡನೇ ಬಾರಿ ಕೊರೋನ ದೃಢಪಟ್ಟಿದೆ. ವೈದ್ಯರ ಸಲಹೆಗೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಹೇಳಿದ್ದಾರೆ.

ರಾಜಸ್ಥಾನದ ಬಿಕನೇರ್ ಸಂಸದರಾಗಿರುವ ಅರ್ಜುನ್ ಸಿಂಗ್ ಮೇಘಾವಲ್ ಜುಲೈ ಅಂತ್ಯದಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ 'ಪಾಪಡ್ ಬ್ರಾಂಡ್'‌ಗೆ ದೇಹದಲ್ಲಿ ಕೊರೋನ ವೈರಸ್ ವಿರುದ್ಧ ಹೋರಾಡುವ ಶಕ್ತಿ ಇದೆ ಎಂದು ಹೇಳಿ ಟ್ರೋಲ್ ಆಗಿದ್ದರು. ರಾಜಸ್ಥಾನದ ಇನ್ನೋರ್ವ ಸಂಸದ ಹಾಗೂ ಕೇಂದ್ರ ಸಚಿವ ಕೈಲಾಶ್ ಚೌಧರಿ ಕೂಡ ಕೊರೋನ ವೈರಸ್ ಇರುವುದು ದೃಢಪಟ್ಟಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)