varthabharthi


ಕರಾವಳಿ

ಎಂದಿನಂತೆ ವಿಮಾನ ಹಾರಾಟ

ಮಂಗಳೂರು ವಿಮಾನ ನಿಲ್ದಾಣವನ್ನು ಮಳೆಗಾಲದಲ್ಲಿ ಮುಚ್ಚುವ ಪ್ರಸ್ತಾವ ಇಲ್ಲ : ಪಿ.ಆರ್.ಒ

ವಾರ್ತಾ ಭಾರತಿ : 9 Aug, 2020

ಮಂಗಳೂರು, ಆ.9: ಮಂಗಳೂರು ವಿಮಾನ ನಿಲ್ದಾಣವನ್ನು ಮಳೆಗಾಲದಲ್ಲಿ ಮುಚ್ಚುವ ಯಾವುದೇ ಪ್ರಸ್ತಾವ ಇಲ್ಲ, ಈ ಕುರಿತು ಬಂದಿರುವ ಮಾಧ್ಯಮ ವರದಿಗಳು ಸರಿ ಇಲ್ಲ ಎಂದು ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿ.ಆರ್.ಒ) ವಾರ್ತಾಭಾರತಿಗೆ ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಎಂದಿನಂತೆ ನಡೆಯಲಿದೆ. ರವಿವಾರ 12.40ಕ್ಕೆ165 ಪ್ರಯಾಣಿಕರನ್ನೊಳಗೊಂಡ ವಿಮಾನ ದುಬೈಗೆ ತೆರಳಲಿದೆ ಎಂದು ತಿಳಿಸಿದರು.

ವಂದೆ ಭಾರತ್ ಮಿಶನ್, ಚಾರ್ಟೆಡ್ ಫ್ಲೈಟ್ ಗಳು ನಿಗದಿತವಾಗಿ ಹಾರಾಟ ನಡೆಸುತ್ತಿವೆ. ದುಬೈ, ದಮಾಮ್ ನಿಂದ ಇಂಡಿಗೋ ನಿಗದಿತವಾಗಿ ಹಾರಾಟ ನಡೆಸುತ್ತಿವೆ. ಸೋಮವಾರ ಮಸ್ಕತ್ ನಿಂದ ನಿಗದಿಯಾಗಿದ್ದ ವಿಮಾನ ರದ್ದಾಗಿದೆ. ಬೆಂಗಳೂರು, ಮುಂಬೈಯಿಂದ ವಿಮಾನ ಹಾರಾಟ ನಡೆಯುತ್ತಿದೆ. ಹೈದರಾಬಾದ್ ನಿಂದಲೂ ವಿಮಾನ ಹಾರಾಟ ನಿಗದಿಯಾಗಿದೆ. ಶನಿವಾರ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದ ಒಂದು ವಿಮಾನ ಇಳಿಯಲು ಸಾಧ್ಯವಾಗದೆ ಮರಳಿ ಬೆಂಗಳೂರಿಗೆ ಸಾಗಿದೆ ಎಂದು ಪಿ.ಆರ್.ಒ ಮಾಹಿತಿ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)