varthabharthi


ರಾಷ್ಟ್ರೀಯ

14.8 ಲಕ್ಷ ಕೊರೋನ ಸೋಂಕಿತರು ಗುಣಮುಖ

ಭಾರತದಲ್ಲಿ 21 ಲಕ್ಷ ದಾಟಿದ ಕೋವಿಡ್ ಪ್ರಕರಣ

ವಾರ್ತಾ ಭಾರತಿ : 9 Aug, 2020

ಹೊಸದಿಲ್ಲಿ, ಆ.9: ಒಂದೇ ದಿನ 64,399 ಹೊಸ ಕೊರೋನ ವೈರಸ್ ರೋಗಿಗಳು ದಾಖಲಾಗುವುದರೊಂದಿಗೆ ದೇಶದಲ್ಲಿ ಕೊರೋನ ಪೀಡಿತರ ಸಂಖ್ಯೆ 21 ಲಕ್ಷದ ಗಡಿಯನ್ನು ದಾಟಿದೆ. ಈತ ನಕ 14.8 ಲಕ್ಷ ಕೊರೋನ ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ರವಿವಾರ ಬೆಳಗ್ಗೆ ತಿಳಿಸಿದೆ.

ನಿನ್ನೆಯಿಂದ 861 ಸಾವುಗಳು ಸಂಭವಿಸಿದ್ದು, ಈ ಮೂಲಕ ಕೊರೋನಕ್ಕೆ ಸಂಬಂಧಿಸಿ ಮೃತಪಟ್ಟವರ ಸಂಖ್ಯೆ 43,379ಕ್ಕೆ ಏರಿಕೆಯಾಗಿದೆ. ದೇಶದಲ್ಲೀಗ ಒಟ್ಟು ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 21,53,011ಕ್ಕೇರಿದೆ. ಇದರಲ್ಲಿ 6,28,747 ಸಕ್ರಿಯ ಪ್ರಕರಣಗಳಿವೆ. ರವಿವಾರ ಬೆಳಗ್ಗೆ ಭಾರತದ ಚೇತರಿಕೆಯ ಪ್ರಮಾಣ ಶೇ.68.78ರಷ್ಟಿದೆ.

ಭಾರತದಲ್ಲಿ ಕಳೆದ ಐದು ದಿನಗಳಿಂದ ಹೆಚ್ಚು ಕೊರೋನ ಪ್ರಕರಣ ವರದಿಯಾಗುತ್ತಿದ್ದು ಅಮೆರಿಕ ಹಾಗೂ ಬ್ರೆಝಿಲ್ ಬಳಿಕ ವಿಶ್ವದ ಮೂರನೇ ಅತ್ಯಂತ ಹೆಚ್ಚು ಸೋಂಕು ಪೀಡಿತ ದೇಶವಾಗಿದೆ.

ಶನಿವಾರದಂದು ಅಮೆರಿಕದಲ್ಲಿ 58,173 ಹೊಸ ಪ್ರಕರಣ ದಾಖಲಾಗಿದೆ. ಈಮೂಲಕ ಒಟ್ಟು ಸೋಂಕಿತರ ಸಂಖ್ಯೆ 5 ಮಿಲಿಯನ್ ದಾಟಿದೆ. ಮತ್ತೊಂದೆಡೆ ಬ್ರೆಝಿಲ್‌ನಲ್ಲಿ 49,970 ಹೊಸ ಕೇಸ್‌ಗಳು ಪತ್ತೆಯಾಗಿದ್ದು, ಕೋವಿಡ್ ಪೀಡಿತರ ಸಂಖ್ಯೆ 3 ಮಿಲಿಯನ್ ದಾಟಿದೆ. .

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)