varthabharthi


ಅಂತಾರಾಷ್ಟ್ರೀಯ

ನೈಜರ್: ಗುಂಡಿನ ದಾಳಿಗೆ ಎಂಟು ಮಂದಿ ಬಲಿ

ವಾರ್ತಾ ಭಾರತಿ : 10 Aug, 2020

ನಿಯಾಮೆ, ನೈಜರ್ : ಮೋಟರ್ ಸೈಕಲ್ ಸವಾರನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಫ್ರಾನ್ಸ್ ನೆರವು ತಂಡದ ಉದ್ಯೋಗಿಗಳು ಸೇರಿದಂತೆ ಕನಿಷ್ಠ ಎಂಟು ಮಂದಿ ಬಲಿಯಾಗಿದ್ದಾರೆ.

ಒಟ್ಟು ಎಂಟು ಮಂದಿ ಸಾವಿಗೀಡಾಗಿದ್ದು, ಇದರಲ್ಲಿ ಸ್ಥಳೀಯ ಗೈಡ್ ಹಾಗೂ ಚಾಲಕ ಸೇರಿದ್ದಾರೆ. ಇತರ ಆರು ಮಂದಿ ಫ್ರೆಂಚರು ಎಂದು ತಿಲ್ಲಾಬೆರಿ ಪ್ರದೇಶದ ಗವರ್ನರ್ ಹೇಳಿದ್ದಾರೆ. ಫ್ರಾನ್ಸ್‌ನ ಏಳು ಮಂದಿ ಮೃತಪಟ್ಟಿರುವುದನ್ನು ಫ್ರಾನ್ಸ್ ಸರ್ಕಾರ ಕೂಡಾ ದೃಢಪಡಿಸಿದೆ.

ಪ್ರವಾಸಕ್ಕಾಗಿ ತೆರಳಿದ್ದ ಅವಧಿಯಲ್ಲಿ ನಮ್ಮ ಹಲವು ಮಂದಿ ಮೃತಪಟ್ಟಿದ್ದಾರೆ ಎಂದು ಫ್ರಾನ್ಸ್‌ನ ಎಸಿಟಿಇಡಿ ನೆರವು ಗುಂಪು ಪ್ರಕಟಿಸಿದೆ. ಆಕರ್ಷಕ ಪ್ರವಾಸಿತಾಣ ಹಾಗೂ ಹಿಂದೆ ಫ್ರೆಂಚರ ಆಡಳಿತಕ್ಕೆ ಒಳಪಟ್ಟಿದ್ದ ಈ ಪ್ರದೇಶದಲ್ಲಿ ಪಾಶ್ಚಿಮಾತ್ಯರ ಮೇಲೆ ನಡೆದ ಮೊದಲ ದಾಳಿ ಇದಾಗಿದೆ. ಪಶ್ಚಿಮ ಆಫ್ರಿಕನ್ನರು ಅಥವಾ ನೈಜರ್ ಜಿರಾಫೆ ಜನಾಂಗದವರು ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ.

ನಾವು ಪರಿಸ್ಥಿತಿ ನಿಭಾಯಿಸುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಮುಂದೆ ಬಿಡುಗಡೆ ಮಾಡಲಾಗುವುದು ಎಂದು ಗವರ್ನರ್ ತಿಡ್ಜಾನಿ ಇಬ್ರಾಹಿಂ ಕಟೀಲ್ಲಾ ಹೇಳಿದ್ದಾರೆ.

ಕೌರ್ ಪಟ್ಟಣದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿ, ರಾಜಧಾನಿಯಿಂದ 100 ಕಿಲೋಮೀಟರ್ ದೂರದ ಪ್ರದೇಶದಲ್ಲಿ ರವಿವಾರ ಬೆಳಗ್ಗೆ 11.30ರ ವೇಳೆಗೆ ಈ ದಾಳಿ ನಡೆದಿದೆ ಎಂದು ಪರಿಸರ ಸೇವೆಗಳ ಇಲಾಖೆ ಮೂಲಗಳು ಹೇಳಿವೆ. ಬಹುತೇಕ ಮಂದಿ ಗುಂಡೇಟಿನಿಂದ ಮೃತಪಟ್ಟಿದ್ದು, ಹಲವು ಗುಂಡುಗಳು ಸ್ಥಳದಲ್ಲಿ ಪತ್ತೆಯಾಗಿವೆ ಎಂದು ತಿಳಿಸಿವೆ.

ದಾಳಿಕೋರರು ಪತ್ತೆಯಾಗಿಲ್ಲ. ಆದರೆ ಅವರು ಬೈಕ್‌ನಲ್ಲಿ ಬಂದು ಕಾದು ಕುಳಿತು ಈ ದಾಳಿ ನಡೆಸಿದ್ದಾರೆ ಎಂದು ವಿವರಿಸಿವೆ.
ಈ ಬರ್ಬರ ಕೃತ್ಯದಲ್ಲಿ ಸುಟ್ಟು ಕರಕಲಾದ ವಾಹನದ ಪಕ್ಕದಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ವಾಹನದ ಹಿಂಬದಿ ಗಾಜಿನಲ್ಲಿ ಗುಂಡಿನಿಂದಾದ ತೂತುಗಳು ಕಾಣುತ್ತಿವೆ ಎಂದು ಮೂಲಗಳು ಹೇಳಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)