varthabharthi


ಅಂತಾರಾಷ್ಟ್ರೀಯ

ಹಿಂದಿಯಲ್ಲಿ ಟ್ವಿಟರ್ ಖಾತೆ ತೆರೆದ ಇರಾನ್ ಸರ್ವೋಚ್ಛ ನಾಯಕ

ವಾರ್ತಾ ಭಾರತಿ : 10 Aug, 2020

ಟೆಹರಾನ್ (ಇರಾನ್), ಆ. 10: ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಸೈಯದ್ ಅಲಿ ಖಾಮಿನೈ ಹಿಂದಿಯಲ್ಲಿ ಅಧಿಕೃತ ಟ್ವಿಟರ್ ಖಾತೆಯೊಂದನ್ನು ತೆರೆದಿದ್ದಾರೆ. ನೂತನ ಖಾತೆಯಲ್ಲಿ ಅವರ ಸ್ವ-ವಿವರಗಳನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ ಹಾಗೂ ಅದೇ ಲಿಪಿಯಲ್ಲಿ ಅದು ಟ್ವೀಟ್‌ಗಳನ್ನು ಮಾಡುತ್ತಿದೆ.

ಅವರ ನೂತನ ಖಾತೆಯು ಈವರೆಗೆ 1,009 ಫಾಲೋವರ್‌ಗಳನ್ನು ಹೊಂದಿದೆ. ಈವರೆಗೆ ಅವರು ಹಿಂದಿಯಲ್ಲಿ ಎರಡು ಟ್ವೀಟ್‌ಗಳನ್ನು ಮಾಡಿದ್ದಾರೆ.

ಅವರು ಪರ್ಷಿಯನ್, ಅರೇಬಿಕ್, ಉರ್ದು, ಫ್ರೆಂಚ್, ಸ್ಪ್ಯಾನಿಶ್, ರಶ್ಯನ್ ಮತ್ತು ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳಲ್ಲೂ ಟ್ವಿಟರ್ ಖಾತೆಗಳನ್ನು ತೆರೆದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)