varthabharthi


ಅಂತಾರಾಷ್ಟ್ರೀಯ

ಗಾಂಧೀಜಿಯ ಚಿನ್ನಲೇಪಿತ ಕನ್ನಡಕ ಇಂಗ್ಲೆಂಡ್‌ನಲ್ಲಿ ಹರಾಜಿಗೆ

ವಾರ್ತಾ ಭಾರತಿ : 10 Aug, 2020

ಲಂಡನ್, ಆ. 10: ಮಹಾತ್ಮಾ ಗಾಂಧೀಜಿ ಧರಿಸಿದ್ದರೆಂದು ಭಾವಿಸಲಾಗಿರುವ ಚಿನ್ನಲೇಪಿತ ಕನ್ನಡಕವೊಂದನ್ನು ಅಮೆರಿಕದಲ್ಲಿ ಹರಾಜಿಗಿಡಲಾಗುತ್ತಿದೆ. ಕನ್ನಡಕವು 10,000 ಪೌಂಡ್ (ಸುಮಾರು 9.80 ಲಕ್ಷ ರೂಪಾಯಿ)ನಿಂದ 15,000 ಪೌಂಡ್ (ಸುಮಾರು 14.70 ಲಕ್ಷ ರೂಪಾಯಿ)ಗೆ ಹರಾಜಾಗುವ ನಿರೀಕ್ಷೆಯಿದೆ.

ಈ ಕನ್ನಡಕವನ್ನು ಲಕೋಟೆಯೊಂದರಲ್ಲಿ ಹಾಕಿ ತಮ್ಮ ಲೆಟರ್‌ಬಾಕ್ಸ್‌ನಲ್ಲಿ ಹಾಕಲಾಗಿತ್ತು ಎಂದು ನೈರುತ್ಯ ಇಂಗ್ಲೆಂಡ್‌ನ ಹ್ಯಾನ್‌ಹಮ್‌ನಲ್ಲಿರುವ ಈಸ್ಟ್ ಬ್ರಿಸ್ಟಲ್ ಆಕ್ಷನ್ಸ್ ರವಿವಾರ ಹೇಳಿದೆ. ಈ ಕನ್ನಡಕದ ಹಿಂದೆ ಇಷ್ಟೊಂದು ಅಗಾಧ ಇತಿಹಾಸವಿದೆ ಎಂದು ತಿಳಿದಾಗ ನಮಗೆ ಆಶ್ಚರ್ಯವಾಯಿತು ಎಂದು ಅದು ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)