varthabharthi


ಕರಾವಳಿ

ಮೂವರು ಸಿಬ್ಬಂದಿಗೆ ಕೋವಿಡ್: ಕಾಸರಗೋಡು ಕೆಎಸ್ಸಾರ್ಟಿಸಿ ಡಿಪೋ ಅನಿರ್ದಿಷ್ಟಾವಧಿ ಬಂದ್

ವಾರ್ತಾ ಭಾರತಿ : 11 Aug, 2020

ಕಾಸರಗೋಡು, ಆ.11: ಇಬ್ಬರು ನೌಕರರು ಮತ್ತು ಮೆಕ್ಯಾನಿಕ್ ಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಾಸರಗೋಡು ಕೆಎಸ್ಸಾರ್ಟಿಸಿ ಡಿಪೋವನ್ನು ಅನಿರ್ದಿಷ್ಟಾವಧಿ ಕಾಲಕ್ಕೆ ಮುಚ್ಚಲಾಗಿದೆ. ಡಿಪೋದಿಂದ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ರವಿವಾರ ಮೆಕ್ಯಾನಿಕ್ ಗೆ ಸೋಂಕು ದೃಢಪಟ್ಟಿತ್ತು. ಇದರಿಂದ ಸೋಮವಾರ ಡಿಪೋದಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಿಸಲಾಗಿತ್ತು. ಈ ನಡುವೆ ಸೋಮವಾರ ಇಬ್ಬರು ನೌಕರಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿ೦ದ   ಡಿಫೋವನ್ನು ಮುಚ್ಚಲಾಗಿದೆ. ಡಿಪೋ ಒಳಗೊಂಡ ಪ್ರದೇಶವನ್ನು ಕಂಟೈನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)