varthabharthi


ಅಂತಾರಾಷ್ಟ್ರೀಯ

ಕಾಶ್ಮೀರ ವಿಚಾರದಲ್ಲಿ ಬೆಂಬಲ ನೀಡದ ಸೌದಿ; ಯುಎಇ ವಿರುದ್ಧ ಪಾಕ್ ಮುನಿಸು

ವಾರ್ತಾ ಭಾರತಿ : 11 Aug, 2020

ಹೊಸದಿಲ್ಲಿ, ಆ.11: ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧದ ತನ್ನ ನಿಲುವನ್ನು ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕಂಟ್ರೀಸ್ (ಓಐಸಿ) ಬೆಂಬಲಿಸಲು ಸೌದಿ ಅರೇಬಿಯಾ ಅವಕಾಶ ನೀಡಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಹದಗೆಡುವ ಸಾಧ್ಯತೆ ಇದ್ದು, ಓಐಸಿಯಲ್ಲೂ ಒಡಕು ಮೂಡುವ ಸಾಧ್ಯತೆ ಇದೆ.

2018ರಲ್ಲಿ ಪಾಕಿಸ್ತಾನಕ್ಕೆ ಯುಎಇ ನೀಡಿದ್ದ 320 ಕೋಟಿ ಡಾಲರ್ ನೆರವಿನ ಪೈಕಿ 100 ಕೋಟಿ ಡಾಲರ್ ಮೊತ್ತವನ್ನು ಅವಧಿಪೂರ್ವವಾಗಿ ಪಾವತಿಸಬೇಕಾದ ಅನಿವಾರ್ಯತೆಗೆ ಪಾಕಿಸ್ತಾನ ಸಿಲುಕಿತ್ತು.

ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಖುರೇಷಿ, ಓಐಸಿ ದೇಶಗಳ ವಿದೇಶಾಂಗ ಸಚಿವರ ಸಭೆ ಆಯೋಜಿಸಬೇಕು ಎನ್ನುವುದು ನಮ್ಮ ನಿರೀಕ್ಷೆ ಎನ್ನುವುದನ್ನು ನಾನು ಮತ್ತೆ ಗೌರವಯುತವಾಗಿ ಹೇಳುತ್ತಿದ್ದಾರೆ. ಆ ಸಭೆ ಆಯೋಜಿಸಲು ಸಾಧ್ಯವಾಗದಿದ್ದರೆ, ಕಾಶ್ಮೀರ ವಿಚಾರದಲ್ಲಿ ಮತ್ತು ದಮನಕ್ಕೊಳಗಾದ ಕಾಶ್ಮೀರಿಗಳ ವಿಚಾರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ಇಸ್ಲಾಮಿಕ್ ದೇಶಗಳ ಸಭೆ ಕರೆಯುವಂತೆ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಒತ್ತಾಯಿಸುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)