varthabharthi


ರಾಷ್ಟ್ರೀಯ

ಪಾಟ್ನಾದಲ್ಲಿ ಸಂಭವಿಸಿದ ಅಪರಾಧದೊಂದಿಗೆ ಯಾವುದೇ ನಂಟು ಇಲ್ಲ: ಸುಪ್ರೀಂ ಕೋರ್ಟ್‌ಗೆ ರಿಯಾ ಚಕ್ರವರ್ತಿ

ವಾರ್ತಾ ಭಾರತಿ : 11 Aug, 2020

ಹೊಸದಿಲ್ಲಿ, ಆ. 11: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿ ಅವರ ತಂದೆ ಬಿಹಾರ್‌ನಲ್ಲಿ ತನ್ನ ವಿರುದ್ಧ ದಾಖಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ ಪಾಟ್ನಾದಲ್ಲಿ ಸಂಭವಿಸಿದ ಅಪರಾಧದ ಆರೋಪದ ಜೊತೆಗೆ ಯಾವುದೇ ಸಂಬಂಧ ಇಲ್ಲ ಎಂದು ನಟಿ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಹೇಳಿದ್ದಾರೆ.

ರಿಯಾ ಚಕ್ರವತಿ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಶ್ಯಾಮ್ ದಿವಾನ್, ಈ ಪ್ರಕರಣದಲ್ಲಿ ರಾಜ್ಯ ಸರಕಾರದ ಗಣನೀಯ ಪ್ರಮಾಣದ ಹಸ್ತಕ್ಷೇಪ, ಪ್ರಭಾವ ಕಂಡು ಬರುತ್ತಿದೆ. ಆದರಿಂದ ಪಕ್ಷಪಾತದ ಆತಂಕ ಉಂಟಾಗಿದೆ ಎಂದು ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರ ಪೀಠಕ್ಕೆ ತಿಳಿಸಿದರು.

ಈ ಪ್ರಕರಣದಲ್ಲಿ ಅವರು ಸಮಯ ಮಿತಿಯನ್ನು ಉಲ್ಲೇಖಿಸಿದರು ಹಾಗೂ ಪಾಟ್ನಾದಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲು ಗಣನೀಯ ಪ್ರಮಾಣದ 38ಕ್ಕೂ ಅಧಿಕ ದಿನಗಳು ವಿಳಂಬವಾಗಿದೆ ಎಂದು ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು 56 ಹೇಳಿಕೆಗಳನ್ನು ದಾಖಲಿಸಿ ಕೊಂಡಿದ್ದಾರೆ. ತನಿಖೆ ಸಾಕಷ್ಟು ಮುಂದುವರಿದಿದೆ ಎಂದು ಅವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)