varthabharthi


ಕರ್ನಾಟಕ

ಸೆ.7ರಿಂದ 18ರವರೆಗೆ ದ್ವಿತೀಯ ಪಿಯು ಪೂರಕ ಪರೀಕ್ಷೆ

ವಾರ್ತಾ ಭಾರತಿ : 11 Aug, 2020

ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.11: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಸೆ. 7ರಿಂದ 18ರವರೆಗೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ವೇಳಾಪಟ್ಟಿ

ಸೆ.7ರಂದು ಬೆಳಗ್ಗೆ (10.15ರಿಂದ 1.30ರವರೆಗೆ) ಉರ್ದು, ಸಂಸ್ಕೃತ, ಮಧ್ಯಾಹ್ನ (2.15ರಿಂದ 5.30) ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೊಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್‍ನೆಸ್, ಗೃಹ ವಿಜ್ಞಾನ (ಎನ್‍ಎಸ್‍ಕ್ಯೂಎಫ್). ಸೆ.8ರಂದು ಬೆಳಗ್ಗೆ ಇತಿಹಾಸ, ಸಂಖ್ಯಾಶಾಸ್ತ್ರ, ಜೀವವಿಜ್ಞಾನ ಪರೀಕ್ಷೆ ನಡೆಯಲಿದೆ.

ಸೆ.9ರಂದು ಬೆಳಗ್ಗೆ ಹಿಂದಿ, ಮಧ್ಯಾಹ್ನ ತಮಿಳು, ತೆಲುಗು, ಮಲಯಾಳ, ಮರಾಠಿ, ಅರೆಬಿಕ್, ಫ್ರೆಂಚ್, ಸೆ.10 ರಂದು ಬೆಳಗ್ಗೆ ಇಂಗ್ಲಿಷ್, ಸೆ.11 ರಂದು ಬೆಳಿಗ್ಗೆ ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಗಣಿತ ವಿಜ್ಞಾನ, ಮಧ್ಯಾಹ್ನ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಭೂಗರ್ಭ ವಿಜ್ಞಾನ, ಸೆ.12 ರಂದು ಬೆಳಗ್ಗೆ ಅರ್ಥಶಾಸ್ತ್ರ, ಭೌತವಿಜ್ಞಾನ ಪರೀಕ್ಷೆ ನಡೆಯಲಿದೆ.

ಸೆ.14 ರಂದು ಬೆಳಗ್ಗೆ ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನ ವಿಜ್ಞಾನ, ಶಿಕ್ಷಣ, ಸೆ.15ರಂದು ಬೆಳಗ್ಗೆ ಕನ್ನಡ, ಸೆ.16 ರಂದು ಬೆಳಗ್ಗೆ ರಾಜ್ಯ ಶಾಸ್ತ್ರ, ಮೂಲ ಗಣಿತ, ಸೆ.17 ರಂದು ಬೆಳಗ್ಗೆ ಸಮಾಜ ವಿಜ್ಞಾನ, ಲೆಕ್ಕಶಾಸ್ತ್ರ, ಗಣಿತ, ಸೆ.18ರಂದು ಬೆಳಗ್ಗೆ ಭೂಗೋಳ ವಿಜ್ಞಾನ, ಮಧ್ಯಾಹ್ನ ಮನಃಶಾಸ್ತ್ರ ಪರೀಕ್ಷೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)