varthabharthi


ರಾಷ್ಟ್ರೀಯ

ಐಪಿಎಲ್ ತಂಡ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಕೋಚ್‌ಗೆ ಕೋವಿಡ್ ದೃಢ

ವಾರ್ತಾ ಭಾರತಿ : 12 Aug, 2020

ಜೈಪುರ, ಆ.12: ತನ್ನ ತಂಡದ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್‌ಗೆ ಕೋವಿಡ್-19ಪಾಸಿಟಿವ್ ವರದಿ ಬಂದಿದೆ ಎಂದು ಐಪಿಎಲ್ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ಬುಧವಾರ ದೃಢಪಡಿಸಿದೆ.

ಈ ವರ್ಷದ ಐಪಿಎಲ್‌ನಲ್ಲಿ ಆಡಲು ಯುಎಇಗೆ ತೆರಳಲು ಮುಂಬೈನಲ್ಲಿ ಮುಂದಿನ ವಾರ ಇಡೀ ತಂಡ ಒಟ್ಟಾಗುವ ಮೊದಲು ತಂಡದ ಸದಸ್ಯರಿಗೆ ಕೋವಿಡ್ ಟೆಸ್ಟ್ ನಡೆಸಲು ನಿರ್ಧರಿಸಲಾಗಿತ್ತು. ಫ್ರಾಂಚೈಸಿಯು ತನ್ನೆಲ್ಲ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ಆಡಳಿತಕ್ಕೆ ಯುಎಇಗೆ ತೆರಳುವ ಮೊದಲು ಬಿಸಿಸಿಐ ಶಿಫಾರಸಿನಂತೆ ಎರಡು ಹೆಚ್ಚುವರಿ ಪರೀಕ್ಷೆ ನಡೆಸಿದೆ.

ರಾಜಸ್ಥಾನದ ದೇಶೀಯ ಕ್ರಿಕೆಟ್‌ನ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿದ್ದ ದಿಶಾಂತ್ ಐಪಿಎಲ್‌ನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರಸ್ತುತ ಅವರು ತವರುಪಟ್ಟಣ ಉದಯಪುರದಲ್ಲಿದ್ದಾರೆ. 14 ದಿನಗಳ ಕ್ವಾರಂಟೈನ್ ಭಾಗವಾಗಿ ಆಸ್ಪತ್ರೆಗೆ ಸೇರಲು ಸಲಹೆ ನೀಡಲಾಗಿತ್ತು. 14 ದಿನಗಳ ಬಳಿಕ ಬಿಸಿಸಿಐ ನಿಯಮದಂತೆ ಮತ್ತೊಮ್ಮೆ ಎರಡು ಬಾರಿ ಕೋವಿಡ್ ಟೆಸ್ಟ್‌ಗೆ ಒಳಗಾಗಲಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ತಂಡ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)