ಉಡುಪಿ : ಚೇತನ ಹೈಸ್ಕೂಲ್ನ ಗ್ರೀಷ್ಮಾ ಶೆಟ್ಟಿಗಾರ್ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ
ಉಡುಪಿ, ಆ.12: ಬ್ರಹ್ಮಾವರ ತಾಲೂಕು ಹಂಗಾರಕಟ್ಟೆ ಮಾಬುಕಳದ ಚೇತನ ಪ್ರೌಢ ಶಾಲೆಯ ವಿದ್ಯಾರ್ಥಿನಿ ಗ್ರೀಷ್ಮಾ ಶೆಟ್ಟಿಗಾರ್ ಇವರು ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಗರಿಷ್ಠ 625 ಅಂಕಗಳಲ್ಲಿ 621 (ಶೇ.99.36) ಅಂಕ ಗಳಿಸಿದ್ದಾರೆ. ಗ್ರೀಷ್ಮಾ ಸಾಸ್ತಾನ ಗುಂಡ್ಮಿಯ ರಾಜೇಂದ್ರ ಶೆಟ್ಟಿಗಾರ್ ದಂಪತಿಗಳ ಪುತ್ರಿ.
Next Story