ಎಚ್-1ಬಿ ವೀಸಾ ಹೊಂದಿರುವವರು ಉದ್ಯೋಗಕ್ಕೆ ಮರಳಲು ಅಮೆರಿಕ ಅನುಮತಿ
ವಾಷಿಂಗ್ಟನ್, ಆ.13: ಅಮೆರಿಕದಲ್ಲಿ ಎಚ್-1ಬಿ ವೀಸಾ ನಿಯಮಾವಳಿಯನ್ನು ಟ್ರಂಪ್ ಆಡಳಿತ ಸಡಿಲಿಸಿದ್ದು, ವೀಸಾ ನಿಷೇಧಕ್ಕೆ ಮೊದಲು ಇದ್ದ ಹುದ್ದೆಗಳಿಗೆ ಎಚ್-1ಬಿ ವೀಸಾ ಹೊಂದಿರುವವರು ಮರಳಲು ಅವಕಾಶ ಮಾಡಿಕೊಟ್ಟಿದೆ.
ಪ್ರಾಥಮಿಕ ವೀಸಾ ಹೊಂದಿರುವವರ ಜತೆಗೆ ಅವರ ಅವಲಂಬಿತರು (ಪತಿ/ಪತ್ನಿ ಮತ್ತು ಮಕ್ಕಳು) ಕೂಡಾ ಆಗಮಿಸಲು ಒಪ್ಪಿಗೆ ನೀಡಿದೆ. ಅಮೆರಿಕದಲ್ಲಿ ಹಾಲಿ ಇರುವ ಉದ್ಯೋಗದಲ್ಲಿ, ಅದೇ ಹುದ್ದೆಯಲ್ಲಿ ಮತ್ತು ಅದೇ ಉದ್ಯೋಗದಾತರ ಜತೆ ಹಾಗೂ ಅದೇ ವೀಸಾ ವರ್ಗೀಕರಣದೊಂದಿಗೆ ಅಮೆರಿಕಕ್ಕೆ ಮರಳಲು ಅನುಮತಿ ನೀಡಲಾಗುತ್ತಿದೆ ಎಂದು ರಕ್ಷಣಾ ಇಲಾಖೆಯ ಸಲಹಾ ಸಮಿತಿ ಹೇಳಿದೆ.
ಅಮೆರಿಕ ಆರ್ಥಿಕತೆ ತಕ್ಷಣ ಹಾಗೂ ನಿರಂತರ ಪ್ರಗತಿ ದೃಷ್ಟಿಯಿಂದ ತಾಂತ್ರಿಕ ನೈಪುಣ್ಯ ಹೊಂದಿದವರು, ಹಿರಿಯ ಹಂತದ ವ್ಯವಸ್ಥಾಪಕರು ಮತ್ತು ಎಚ್1-ಬಿ ವೀಸಾ ಹೊಂದಿದ ಉದ್ಯೋಗಿಗಳು ಕೂಡಾ ಮರಳು ಅನುಮತಿ ನೀಡಲಾಗಿದೆ.
ಸಾರ್ವಜನಿಕ ಆರೋಗ್ಯ ಅಥವಾ ಆರೋಗ್ಯ ಸೇವಾ ವೃತ್ತಿಪರರು, ಕೋವಿಡ್-19 ನಿರ್ಮೂಲನೆಗೆ ಸಂಶೋಧನೆ ನಡೆಸುವ ಸಂಶೋಧಕರು ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಪ್ರಯೋಜನವಾಗುವ ಕ್ಷೇತ್ರದಲ್ಲಿ ವೈದ್ಯಕೀಯ ಸಂಶೋಧನೆ ನಡೆಸುವ ಸಂಶೋಧಕರು ದೇಶಕ್ಕೆ ವಾಪಸ್ಸಾಗಲು ಕೂಡಾ ಅವಕಾಶವಿದೆ.