varthabharthi


ಬೆಂಗಳೂರು

ಡಿ.ಜೆ.ಹಳ್ಳಿ ಗೋಲಿಬಾರ್ ನಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ

ವಾರ್ತಾ ಭಾರತಿ : 13 Aug, 2020

ಬೆಂಗಳೂರು, ಆ.13: ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ಪೊಲೀಸರ ಗೋಲಿಬಾರ್ ನಿಂದ ಮೃತಪಟ್ಟ ಯಾಸೀನ್ ಪಾಷ(22), ಶೇಖ್ ಸಾದಿಕ್(26) ಹಾಗೂ ವಾಜೀದ್ ಖಾನ್(19) ಅವರ ಅಂತ್ಯಕ್ರಿಯೆಯನ್ನು ನಗರದ ನಂದಿದುರ್ಗ ರಸ್ತೆಯಲ್ಲಿರುವ ಖಾಝಿ ಅಬ್ದುಲ್ ಖುದ್ದೂಸ್ ಸಾಹೇಬ್ ಖಬರಸ್ಥಾನ್‍ನಲ್ಲಿ ನೆರವೇರಿಸಲಾಯಿತು.

ಕೋವಿಡ್-19 ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಮೃತರ ಜನಾಝಾ ನಮಾಝ್‍ನಲ್ಲಿ ಮಾಜಿ ಸಚಿವರಾದ ನಸೀರ್ ಅಹ್ಮದ್, ಝಮೀರ್ ಅಹ್ಮದ್ ಖಾನ್ ಪಾಲ್ಗೊಂಡಿದ್ದರು. ಇದೇ ವೇಳೆ ಮೃತರ ಕುಟುಂಬ ಸದಸ್ಯರಿಗೆ ಉಭಯ ನಾಯಕರು ಸಾಂತ್ವನ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)