‘ಜ್ಯೂನಿಯರ್ ಸ್ಟೇನ್’ ಖ್ಯಾತಿಯ ಕ್ರಿಕೆಟಿಗ ಕರಣ್ ತಿವಾರಿ ಆತ್ಮಹತ್ಯೆ
ಐಪಿಎಲ್ ನಲ್ಲಿ ಅವಕಾಶ ಸಿಗದೆ ಇದ್ದ ಕಾರಣ ಖಿನ್ನತೆ ಶಂಕೆ
ಮುಂಬೈ: ‘ಜ್ಯೂನಿಯರ್ ಸ್ಟೇನ್’ ಎಂದೇ ಖ್ಯಾತರಾಗಿದ್ದ ಮುಂಬೈ ಕ್ಲಬ್ ಕ್ರಿಕೆಟರ್ ಕರಣ್ ತಿವಾರಿ ಮಲಾಡ್ ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
2020ನೆ ಐಪಿಎಲ್ ನಲ್ಲಿ ಅವಕಾಶ ಸಿಗದೆ ಇದ್ದ ಕಾರಣ ಅವರು ಖಿನ್ನತೆಯಲ್ಲಿದ್ದರು ಎಂದು ಗೆಳೆಯರೊಬ್ಬರು ಮಾಹಿತಿ ನೀಡಿದ್ದಾರೆ. ದಕ್ಷಿಣ ಆಫ್ರಿಕಾದ ಬೌಲರ್ ಡೇಲ್ ಸ್ಟೇನ್ ರಂತೆಯೇ ಬೌಲಿಂಗ್ ಮಾಡುತ್ತಿದ್ದ ಅವರು ‘ಜ್ಯೂನಿಯರ್ ಸ್ಟೇನ್’ ಎಂದೇ ಖ್ಯಾತರಾಗಿದ್ದರು.
ತಮ್ಮ ಮನೆಯ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದರು. ಈ ಬಗ್ಗೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story