varthabharthi


ರಾಷ್ಟ್ರೀಯ

ಶ್ರೀನಗರ: ಪೊಲೀಸ್ ತಂಡದ ಮೇಲೆ ಉಗ್ರರಿಂದ ದಾಳಿ, ಇಬ್ಬರು ಪೊಲೀಸರು ಮೃತ್ಯು

ವಾರ್ತಾ ಭಾರತಿ : 14 Aug, 2020

ಶ್ರೀನಗರ, ಆ.14: ನಗರದಿಂದ ಹೊರವಲಯದಲ್ಲಿರುವ ನೌಗಂನಲ್ಲಿ ಇಂದು ಬೆಳಗ್ಗೆ ಉಗ್ರಗಾಮಿಗಳು ಪೊಲೀಸ್ ತಂಡದ ಮೇಲೆ ಗುಂಡಿನ ಮಳೆ ಸುರಿಸಿದ ಪರಿಣಾಮ ಜಮ್ಮು-ಕಾಶ್ಮೀರದ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ.

 ನೌಗಂ ಬೈಪಾಸ್ ಸಮೀಪ ಉಗ್ರಗಾಮಿಗಳು ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದ್ದು, ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಇಬ್ಬರು ಪೊಲೀಸ್ ಸಿಬ್ಬಂದಿ ಹುತಾತ್ಮರಾದರು. ಘಟನಾ ಸ್ಥಳವನ್ನು ಸುತ್ತುವರಿಯಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)