varthabharthi


ಕ್ರೀಡೆ

ಬ್ಯಾಡ್ಮಿಂಟನ್ ಆಟಗಾರ್ತಿ ಸಿಕ್ಕಿ ರೆಡ್ಡಿಗೆ ಕೊರೋನ ಪಾಸಿಟಿವ್

ವಾರ್ತಾ ಭಾರತಿ : 14 Aug, 2020

ಹೈದರಾಬಾದ್, ಆ.14: ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸಿಕ್ಕಿ ರೆಡ್ಡಿ ಹಾಗೂ ಫಿಸಿಯೋಥೆರಪಿಸ್ಟ್ ಕಿರಣ್ ಸಿ. ಹೈದರಾಬಾದ್‌ನಲ್ಲಿರುವ ಪುಲ್ಲೇಲ ಗೋಪಿಚಂದ್‌ಬ್ಯಾಡ್ಮಿಂಟನ್ ಅಕಾಡಮಿಯಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಶಿಬಿರಕ್ಕಾಗಿ ಆಗಮಿಸಿದ್ದು, ಈರ್ವರಿಗೂ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ ಎಂದು ಭಾರತದ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ)ಪತ್ರಿಕಾಪ್ರಕಟನೆಯೊಂದರಲ್ಲಿ ತಿಳಿಸಿದೆ.

ಭಾರತ ಕ್ರೀಡಾ ಪ್ರಾಧಿಕಾರ(ಸಾಯ್)ಶಿಬಿರಕ್ಕೆ ಆಗಮಿಸುವ ಎಲ್ಲ ಆಟಗಾರರು, ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್-19 ಪರೀಕ್ಷೆ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಸಿಕ್ಕಿ ರೆಡ್ಡಿ ಹಾಗೂ ಕಿರಣ್‌ಗೆ ಕೋವಿಡ್ ಇರುವುದು ದೃಢಪಟ್ಟಿದೆ.

ಸಿಕ್ಕಿ ಹಾಗೂ ಕಿರಣ್‌ರಲ್ಲಿ ಕೊರೋನ ರೋಗ ಲಕ್ಷಣ ಕಾಣಿಸಿಕೊಂಡಿರಲಿಲ್ಲ. ಈ ಇಬ್ಬರು ಹೈದರಾಬಾದ್‌ನವರಾಗಿದ್ದು, ತಮ್ಮಮನೆಯಿಂದಲೇ ಬಂದು ಶಿಬಿರದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಸ್ಯಾನಿಟೈಸ್ ಮಾಡಲು ಗೋಪಿಚಂದ್ ಅಕಾಡಮಿಯನ್ನು ಮುಚ್ಚಲಾಗಿದೆ. ಸಿಕ್ಕಿ ಹಾಗೂ ಕಿರಣ್‌ರೊಂದಿಗಿರುವ ಎಲ್ಲ ಪ್ರಾಥಮಿಕ ಸಂಪರ್ಕಿತರನ್ನುಪತ್ತೆ ಹಚ್ಚುವ ಕಾರ್ಯ ಆರಂಭಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)