varthabharthi


ರಾಷ್ಟ್ರೀಯ

1 ಲಕ್ಷ ರೂ. ಮೌಲ್ಯದ ಆಭರಣ ಖರೀದಿ, 20,000ಕ್ಕೂ ಅಧಿಕ ಮೊತ್ತದ ಹೋಟೆಲ್ ಬಿಲ್ ತೆರಿಗೆ ವ್ಯಾಪ್ತಿಯಡಿ?

ವಾರ್ತಾ ಭಾರತಿ : 14 Aug, 2020

ಹೊಸದಿಲ್ಲಿ: ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆ ನಿಗಾ ಇಡಲಿರುವ ಹಣಕಾಸು ವ್ಯವಹಾರಗಳ  ಪಟ್ಟಿಯನ್ನು  ಇನ್ನಷ್ಟು ಹೆಚ್ಚಿಸುವ ಉದ್ದೇಶ ಸರಕಾರಕ್ಕಿದ್ದು ಇನ್ನು ಮುಂದೆ  ಐಟಿ ಇಲಾಖೆ ನಿಗಾ ಇಡಬಹುದಾದ ಹಣಕಾಸು ವ್ಯವಹಾರಗಳಲ್ಲಿ ರೂ. 20,000ಕ್ಕೂ ಅಧಿಕ ಮೊತ್ತದ ಹೋಟೆಲ್ ಬಿಲ್ ಪಾವತಿ, ರೂ. 50,000ಕ್ಕೂ ಹೆಚ್ಚು ವಿಮಾ ಪ್ರೀಮಿಯಂ ಪಾವತಿ, ರೂ. 20,000ಕ್ಕೂ ಅಧಿಕ ಆರೋಗ್ಯ ವಿಮೆ ಪಾವತಿ ಸೇರಿವೆ. ಇವುಗಳ ಹೊರತಾಗಿ ದೇಣಿಗೆಗಳು ಹಾಗೂ ವಾರ್ಷಿಕ ರೂ. 1 ಲಕ್ಷಕ್ಕೂ ಅಧಿಕ ಮೊತ್ತದ ಶಾಲಾ ಕಾಲೇಜು ಶುಲ್ಕ ಪಾವತಿ, ವಿದೇಶ ಪ್ರವಾಸ, ದೇಶೀಯ ಬಿಸಿನೆಸ್ ಕ್ಲಾಸ್ ವಿಮಾನ ಪ್ರಯಾಣ, ರೂ. 1 ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನಾಭರಣ, ಪೈಂಟಿಂಗ್ ಖರೀದಿ, ಡಿಮ್ಯಾಟ್ ಖಾತೆಗಳು ಹಾಗೂ ಬ್ಯಾಂಕ್ ಲಾಕರ್‍ಗಳನ್ನೂ ಸ್ಟೇಟ್ಮೆಂಟ್ ಆಪ್ ಫೈನಾನ್ಶಿಯಲ್ ಟ್ರಾನ್ಸಾಕ್ಷನ್ಸ್ ಪಟ್ಟಿಯಲ್ಲಿ ಸೇರಿಸುವ ಪ್ರಸ್ತಾಪ ಸರಕಾರಕ್ಕಿದೆ ಎಂದು indianexpress.com ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ `ಟ್ರಾನ್ಸ್‍ಪರೆಂಟ್ ಟ್ಯಾಕ್ಸೇಶನ್-ಹಾನರಿಂಗ್ ದಿ ಹಾನೆಸ್ಟ್' ವೇದಿಕೆಯನ್ನು ಅನಾವರಣಗೊಳಿಸಿದಂದೇ ಈ ಹೊಸ ಪ್ರಸ್ತಾವನೆ ಕುರಿತಾಗಿ ತಿಳಿದು ಬಂದಿದೆ.

ಆದರೆ ಮೇಲೆ ತಿಳಿಸಲಾದ ಕ್ರಮಗಳು ಪ್ರಸ್ತಾವಿತ ಹಾಗೂ ಹೆಚ್ಚು ತೆರಿಗೆ ಪಾವತಿಸುವಂತಾಗಲು ಹಾಗೂ ಪಾರದರ್ಶಕತೆ ಕಾಪಾಡುವ ಉದ್ದೇಶ ಹೊಂದಿವೆ, ಇವುಗಳು ಇನ್ನಷ್ಟೇ ಜಾರಿಯಾಗಬೇಕಿದೆ,'' ಎಂದು ಮೈಗವ್‍ಇಂಡಿಯಾ ಟ್ವೀಟ್ ಹೇಳಿದೆ.

ಈ ರೀತಿ ಎಸ್‍ಎಫ್‍ಟಿಯಲ್ಲಿ ಹೆಚ್ಚು ವಿಭಾಗಗಳು ಸೃಷ್ಟಿಯಾದಂತೆಯೇ ತೆರಿಗೆ ಪ್ರಾಧಿಕಾರಗಳಿಗೆ ಹರಿದು ಬರುವ ಮಾಹಿತಿ ಅಧಿಕವಾಗಲಿದೆಯಾದರೂ ಸ್ವಇಚ್ಛೆಯಿಂದ ತೆರಿಗೆ ಪಾವತಿಸುವ ಜವಾಬ್ದಾರಿ ತೆರಿಗೆದಾರರ ಮೇಲಿರಲಿದೆ. ಈ ಹೊಸ ಪ್ರಸ್ತಾವನೆ ಜಾರಿಗೊಂಡಾಗ ಅದು ತೆರಿಗೆದಾರರ ತೆರಿಗೆ ಕಡಿತ/ಸಂಗ್ರಹ ಮುಂಗಡ ತೆರಿಗೆ ಕುರಿತ ಮಾಹಿತಿಯ ವಾರ್ಷಿಕ ವರದಿಯಲ್ಲಿ ಫಾರ್ಮ್ 26ಎಎಸ್‍ನಲ್ಲಿ ಕಾಣಿಸಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)