varthabharthi


ರಾಷ್ಟ್ರೀಯ

ತಮ್ಮನ್ನು 'ಯುವರ್ ಆನರ್' ಎಂದು ಸಂಬೋಧಿಸಿದ ವಕೀಲರಿಗೆ ಸಿಜೆಐ ಬೊಬ್ಡೆ ಪ್ರಶ್ನೆ

“ನೀವೇನು ಅಮೆರಿಕಾದ ಸುಪ್ರೀಂ ಕೋರ್ಟ್ ನಲ್ಲಿದ್ದೀರಾ?”

ವಾರ್ತಾ ಭಾರತಿ : 14 Aug, 2020

ಸಿಜೆಐ ಎಸ್ ಎ ಬೊಬ್ಡೆ

ಹೊಸದಿಲ್ಲಿ: ಗುರುವಾರ ಪ್ರಕರಣದ ವಿಚಾರಣೆಯೊಂದರ ವೇಳೆ ತಮ್ಮನ್ನು ‘ಯುವರ್ ಆನರ್' ಎಂದು ಸಂಬೋಧಿಸಿದ ವಕೀಲರೊಬ್ಬರಿಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ಭಾರತೀಯ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರುಗಳನ್ನು ಹೇಗೆ ಸಂಬೋಧಿಸಬೇಕೆಂಬುದರ ಬಗ್ಗೆ ಪಾಠವನ್ನೇ ಮಾಡಿ ಬಿಟ್ಟರು.

ವಕೀಲರು ಎದ್ದು ನಿಂತು ಮುಖ್ಯ ನ್ಯಾಯಮೂರ್ತಿಗಳನ್ನು `ಯುವರ್ ಹಾನರ್'' ಎನ್ನುತ್ತಲೇ ``ನೀವೇನು ಅಮೆರಿಕಾದ ಸುಪ್ರೀಂ ಕೋರ್ಟ್ ಮುಂದೆ ಹಾಜರಾಗಿದ್ದೀರಾ? ಯುವರ್ ಹಾನರ್ ಪದದ ಬಳಕೆ ಅಮೆರಿಕಾದಲ್ಲಿ, ಭಾರತದ ಸುಪ್ರೀಂ ಕೋರ್ಟ್ ನಲ್ಲಲ್ಲ,'' ಎಂದು ಬಿಟ್ಟರು.

ಭಾರತೀಯ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರುಗಳನ್ನು ಹೇಗೆ ಸಂಬೋಧಿಸಬೇಕೆಂಬುದರ ಕುರಿತು ಯಾವುದೇ ಒಂದು ನಿರ್ದಿಷ್ಟ ನಿಯಮ ಇಲ್ಲವೆಂದು ವಕೀಲರು ಹೇಳಿದಾಗ ``ಕಾನೂನಿನಲ್ಲಿ ಮಾಹಿತಿಯಿಲ್ಲದೇ ಇರಬಹುದು ಆದರೆ ನ್ಯಾಯಾಲಯದಲ್ಲಿನ ಪದ್ಧತಿಯಮತೆ ನಡೆಯಬೇಕು. ನಾವು ಯುವರ್ ಆನರ್ ಬಳಕೆ ಮಾಡುವುದಿಲ್ಲ, ಭಾರತದಲ್ಲಿ ಬಳಕೆಯಲ್ಲಿರುವ ಪದಗಳನ್ನು ಬಳಸಿ,'' ಎಂದರು.

ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‍ಗ:ಳಲ್ಲಿ ನ್ಯಾಯಾಧೀಶರುಗಳನ್ನು ಹೇಗೆ ಸಂಬೋಧಿಸಬೇಕೆಂಬುದು ಇಂದು ಚರ್ಚೆಯ ವಿಷಯವಾಗಿದ್ದು ಈ ಕುರಿತಂತೆ ಹಲವು ಅಪೀಲುಗಳೂ ದಾಖಲಾಗಿವೆ.

ತಮ್ಮನ್ನು ಮೈ ಲಾರ್ಡ್, ಯುವರ್ ಲಾರ್ಡ್ ಶಿಪ್ ಅಥವಾ ಯುವರ್ ಆನರ್ ಎಂದು ಸಂಬೋಧಿಸುವುದು ಕಡ್ಡಾಯವಲ್ಲ ಎಂದು 2014ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಪೀಠದಲ್ಲಿ  ಜಸ್ಟಿಸ್ ಎಚ್ ಎಲ್ ದತ್ತು ಜತೆ ಜಸ್ಟಿಸ್ ಬೊಬ್ಡೆ ಕೂಡ ಇದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)