varthabharthi


ರಾಷ್ಟ್ರೀಯ

ತೆಲಂಗಾಣ: ಕಂದಾಯ ಅಧಿಕಾರಿಯಿಂದ 1.1 ಕೋಟಿ ರೂ. ಹಣವಶ

ವಾರ್ತಾ ಭಾರತಿ : 15 Aug, 2020

ಹೈದರಾಬಾದ್,ಆ.15:ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿಗಳು ತೆಲಂಗಾಣದಲ್ಲಿ ಮೆದ್‌ಚಾಲ್-ಮಲ್ಕಜ್‌ಗಿರಿ ಜಿಲ್ಲೆಯಲ್ಲಿ ಸ್ಥಳೀಯ ಕಂದಾಯ ಅಧಿಕಾರಿಯ ಬಳಿಯಿದ್ದ 1.1 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಎಎಸ್ ರಾವ್ ನಗರದಲ್ಲಿರುವ ತನ್ನಬಾಡಿಗೆ ಮನೆಯಲ್ಲಿ ಲಂಚವನ್ನು ಸ್ವೀಕರಿಸುತ್ತಿದ್ದಾಗ ಜಿಲ್ಲೆಯ ಕೀಸರ ವಲಯದ ಮೇಲುಸ್ತುವಾರಿ ಮಂಡಳ ಅಧಿಕಾರಿ ಎರ್ವ ಬಾಲರಾಜು ನಾಗರಾಜು ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯಲಾಗಿದೆ.

ಗ್ರಾಮಾಧಿಕಾರಿ ಹಾಗೂ ಇತರ ಇಬ್ಬರು ರಿಯಲ್‌ಎಸ್ಟೇಟ್ ಏಜೆಂಟ್‌ರನ್ನು ಬಂಧಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)