ಮೂಡುಬಿದಿರೆ: ಶ್ರೀ ಮೂಡುಬಿದಿರೆ ದಿಗಂಬರ ಜೈನ ವಿದ್ಯಾವರ್ಧಕ ಸಂಘ ಪ್ರವರ್ತಿತ ಡಿ.ಜೆ. ಅನುದಾನಿತ ಹಿ.ಪ್ರಾ.ಶಾಲಾ ಆಂಗ್ಲ ಭಾಷಾ ಶಿಕ್ಷಕಿ ತ್ರಿಶಲಾ ಅನಂತ್ರಾಜ್ (50) ಅಲ್ಪಕಾಲದ ಅಸೌಖ್ಯದಿಂದ ಸೆ.5ರಂದು ನಿಧನ ಹೊಂದಿದರು. ಅವರು ಪತಿ, ಜೈನ ಪ.ಪೂ. ಕಾಲೇಜು ಕಚೇರಿಯ ನಿವೃತ್ತ ಅಧೀಕ್ಷಕ ಸುಭಾಶ್ಚಂದ್ರ ಜೈನ್, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.