ಸೌದಿ: ಪ್ರಸಿದ್ಧ ಕುರ್ ಆನ್ ವಾಚಕ ಅಬ್ದುಲ್ಲಾ ಬಸ್ಫರ್ ಬಂಧನ
ಸೌದಿ ಅರೇಬಿಯಾ: ಖ್ಯಾತ ಕುರ್ ಆನ್ ವಾಚಕ ಶೇಖ್ ಅಬ್ದುಲ್ಲಾ ಬಸ್ಫರ್ ಅವರನ್ನು ಸೌದಿ ಅರೇಬಿಯಾ ಅಧಿಕಾರಿಗಳು ಇತ್ತೀಚೆಗೆ ಬಂಧಿಸಿದ್ದಾರೆ ಎನ್ನುವ ಅಂಶವನ್ನು ‘ಪ್ರಿಸನರ್ಸ್ ಆಫ್ ಕಾನ್ಶನ್ಸ್’ ಟ್ವೀಟ್ ಒಂದರಲ್ಲಿ ಬಹಿರಂಗಪಡಿಸಿದೆ.
‘ಪ್ರಿಸನರ್ಸ್ ಆಫ್ ಕಾನ್ಶನ್ಸ್’ ಟ್ವಿಟರ್ ಹ್ಯಾಂಡಲ್ ಪ್ರಕಾರ, ಅಬ್ದುಲ್ಲಾ ಬಸ್ಫರ್ ಅವರನ್ನು ಆಗಸ್ಟ್ ನಲ್ಲಿ ಬಂಧಿಸಲಾಗಿದ್ದು, ಅವರನ್ನು ಎಲ್ಲಿ ಹಾಗೂ ಹೇಗೆ ಬಂಧಿಸಲಾಗಿದೆ ಎಂಬ ಬಗ್ಗೆ ಯಾವುದೇ ವಿವರಗಳಿಲ್ಲ.
ಡಾ.ಅಬ್ದುಲ್ ಬಸ್ಫರ್ ಅವರು 2020ರ ಆಗಸ್ಟ್ ನಿಂದ ಬಂಧನದಲ್ಲಿರುವುದನ್ನು ನಾವು ದೃಢಪಡಿಸುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ. ಬಸ್ಫರ್ ಅವರು ಜಿದ್ದಾದಲ್ಲಿರುವ ಕಿಂಗ್ ಅಬ್ದುಲ್ ಅಝೀಝ್ ವಿಶ್ವವಿದ್ಯಾನಿಲಯದ ಶರಿಯಾ ಮತ್ತು ಇಸ್ಲಾಮಿಕ್ ಅಧ್ಯಯನ ವಿಭಾಗದ ಪ್ರೊಫೆಸರ್ ಅಗಿ ಕಾರ್ಯ ನಿರ್ವಹಿಸುತ್ತಿದ್ದರು. ವರ್ಲ್ಡ್ ಬುಕ್ ಆ್ಯಂಡ್ ಸುನ್ನಹ್ ಆರ್ಗನೈಸೇಷನ್ ನ ಪ್ರಧಾನ ಕಾರ್ಯರ್ಶಿಯಾಗಿಯೂ ಅವರು ಕೆಲಸ ಮಾಡಿದ್ದರು.
Next Story