ಏರ್ಮನ್ ಹುದ್ದೆಗೆ ನೇಮಕಾತಿ ರ್ಯಾಲಿಗೆ ಆಹ್ವಾನ
ಬೆಂಗಳೂರು, ಸೆ. 6: ಭಾರತೀಯ ವಾಯುಪಡೆ (ಐಎಎಫ್) ಗ್ರೂಪ್ ಎಕ್ಸ್ (ಟೆಕ್ನಿಕಲ್ ಟ್ರೇಡ್) (ಎಜುಕೇಷನ್ ಇನ್ಸ್ಸ್ಟ್ರಕ್ಟರ್ ಟ್ರೇಡ್ ಹೊರತುಪಡಿಸಿ) ನಲ್ಲಿ ಏರ್ಮನ್ ಹುದ್ದೆಗೆ ನೇಮಕಾತಿ ರ್ಯಾಲಿ ನಡೆಸಲಿದ್ದು, ಕರ್ನಾಟಕದ ಅವಿವಾಹಿತ ಪುರುಷ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಇಂಟರ್ ಮೀಡಿಯೇಟ್ /10+2/ ತತ್ಸಮಾನ ಪರೀಕ್ಷೆಯನ್ನು ಗಣಿತ, ಭೌತಶಾಸ್ತ್ರ, ಇಂಗ್ಲಿಷ್ ವಿಷಯಗಳಲ್ಲಿ ಶೇ. 50 ಅಂಕಗಳೊಂದಿಗೆ ಹಾಗೂ ಇಂಗ್ಲಿಷ್ನಲ್ಲಿ ಶೇ. 50 ಅಂಕಗಳಿಸಿ ಪಾಸಾಗಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೋಮಾ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕಿರುತ್ತದೆ.
2000 ರ ಜನವರಿ 17 ಮತ್ತು 2003ರ ಡಿಸೆಂಬರ್ 30 ರ ಮಧ್ಯೆ ಜನಿಸಿರಬೇಕು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ದೇಹದಾಢ್ರ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಇತ್ಯಾದಿ ನಡೆಸಲಾಗುತ್ತದೆ. ಸೆ.23 ರಿಂದ ಅ.4 ವರೆಗೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹಾಗೂ 7 ಏರ್ಮನ್ ನೇಮಕಾತಿ ಕೇಂದ್ರದಲ್ಲಿ ನೇಮಕಾತಿ ರ್ಯಾಲಿ ನಡೆಯಲಿದೆ.
ಸೆ.8 ರಿಂದ ಸೆ10ರವರೆಗೆ www.airmenselection.cdac.in ನಲ್ಲಿ ರ್ಯಾಲಿಗೆ ನೋಂದಣಿ ಮಾಡಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಅದೇ ವೆಬ್ಸೈಟ್ ನೋಡಬಹುದು ಎಂದು ಪ್ರಕಟನೆ ತಿಳಿಸಿದೆ.