ಯುಎಇ: ಒಂದೇ ದಿನದಲ್ಲಿ 2443 ಕೊರೋನ ರೋಗಿಗಳು ಗುಣಮುಖ
ಅಬುದಾಬಿ, ಸೆ.6: ಯುಎಇನಲ್ಲಿ ರವಿವಾರ 2443 ರೋಗಿಗಳು ಕೊರೋನ ವೈರಸ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು ಇದು ಒಂದು ದಿನದ ಗರಿಷ್ಠ ದಾಖಲೆಯಾಗಿದೆ. ಇದರೊಂದಿಗೆ ಆ ದೇಶದಲ್ಲಿ ಕೊರೋನ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 66,095ಕ್ಕೇರಿದೆ.
ಆರೋಗ್ಯ ಹಾಗೂ ರೋಗತಡೆಗೆ ಸಚಿವಾಲಯ ರವಿವಾರ ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಪ್ರಕಾರ ಕಳೆದ 24 ತಾಸುಗಳಲ್ಲಿ 513 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 73,984ಕ್ಕೇರಿದೆ.
Next Story