varthabharthi


ರಾಷ್ಟ್ರೀಯ

ಮತ್ತೊಮ್ಮೆ ಏಮ್ಸ್‌ಗೆ ದಾಖಲಾದ ಗೃಹ ಸಚಿವ ಅಮಿತ್ ಶಾ

ವಾರ್ತಾ ಭಾರತಿ : 13 Sep, 2020

ಹೊಸದಿಲ್ಲಿ, ಸೆ.13: ಆಸ್ಪತ್ರೆಯಿಂದ ಬಿಡುಗಡೆಯಾದ ಸುಮಾರು ಎರಡು ವಾರಗಳ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೊಮ್ಮೆ ಕಳೆದ ರಾತ್ರಿ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಾ ಅವರು ಈ ಹಿಂದೆ ಕೋವಿಡ್-19 ನಂತರದ ಚಿಕಿತ್ಸೆಗಾಗಿ ರಾಷ್ಟ್ರ ರಾಜಧಾನಿಯ ಪ್ರತಿಷ್ಟಿತ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

55ರ ವಯಸ್ಸಿನ ಬಿಜೆಪಿಯ ನಾಯಕನಿಗೆ ಆಗಸ್ಟ್ 12ರಂದು ಕೊರೋನ ವೈರಸ್ ಸೋಂಕು ತಗಲಿತ್ತು. ಆಗ ಅವರು ಗುರುಗ್ರಾಮದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆಗಸ್ಟ್ 14 ರಂದು ತನ್ನ ವೈದ್ಯರ ಸಲಹೆಗೆ ಮೇರೆಗೆ ಇನ್ನೂ ಕೆಲವು ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿರುವುದಾಗಿ ಟ್ವೀಟ್ ಮಾಡಿದ್ದರು.

ಆಗಸ್ಟ್ 18 ರಂದು ಸುಸ್ತು ಹಾಗೂ ಮೈಕೈನೋವಿನ ಕಾರಣಕ್ಕೆ ಏಮ್ಸ್‌ಗೆ ದಾಖಲಾಗಿದ್ದರು. 13 ದಿನಗಳ ಬಳಿಕ ಆಗಸ್ಟ್ 31ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಗೃಹ ಸಚಿವರು ಚೇತರಿಸಿಕೊಂಡಿದ್ದಾರೆ ಎಂದು ಏಮ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.

ಇದೀಗ ಅವರು ಮತ್ತೊಮ್ಮೆ ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ ಏಮ್ಸ್‌ಗೆ ದಾಖಲಾಗಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಅದಕ್ಕೂ ಮೊದಲೇ ಶಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)