ಬಿ.ಎಚ್. ಅಬ್ದುಲ್ ಅಝೀಝ್ ಕೊಡ್ಲಿಪೇಟೆ
ಮಂಗಳೂರು, ಸೆ.13: ಮೂಲತಃ ಬಜ್ಪೆಯ ಪ್ರಸ್ತುತ ಕೊಡಗು ಜಿಲ್ಲೆಯ ಕೊಡ್ಲಿಪೇಟೆಯ ಹ್ಯಾಂಡ್ಪೋಸ್ಟ್ ನಿವಾಸಿ ಬಿ.ಎಚ್.ಅಬ್ದುಲ್ ಅಝೀಝ್ (73) ಅವರು ಅಲ್ಪಕಾಲದ ಅಸೌಖ್ಯದಿಂದ ರವಿವಾರ ಮುಂಜಾನೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಮತ್ತು ನಾಲ್ಕು ಮಂದಿ ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಕೊಡ್ಲಿಪೇಟೆಯ ಮಸೀದಿಯ ದಫನಭೂಮಿಯಲ್ಲಿ ರವಿವಾರ ಸಂಜೆ ನೆರವೇರಿಸಲಾಯಿತು.
ಅಬ್ದುಲ್ ಅಝೀಝ್ ಅವರು ಕೊಡ್ಲಿಪೇಟೆ ಹ್ಯಾಂಡ್ಪೋಸ್ಟ್ನ ಮಸ್ಜಿದುನ್ನೂರ್ನ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
Next Story