varthabharthi


ನಿಧನ

ಹಾಜಿ ಮುಹಮ್ಮದ್ ಶರೀಫ್ ಜೋಕಟ್ಟೆ

ವಾರ್ತಾ ಭಾರತಿ : 15 Sep, 2020

ಮಂಗಳೂರು, ಸೆ.15: ಜೋಕಟ್ಟೆಯ ಮೇಗಿನ ಮನೆಯ ನಿವಾಸಿ, ಉದ್ಯಮಿ, ಗುತ್ತಿಗೆದಾರ ಹಾಜಿ ಮುಹಮ್ಮದ್ ಶರೀಫ್ ಜೋಕಟ್ಟೆ (54) ಮಂಗಳವಾರ ಸಂಜೆ ನಗರದ ಖಾಸಗಿ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ‌ ಹಾಗೂ ಮೂವರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಇದರ ಸದಸ್ಯರಾಗಿದ್ದ ಅವರು ಧಾರ್ಮಿಕ ಮತ್ತು ಸಾಮಾಜಿಕ ರಂಗದಲ್ಲಿ ಸಕ್ರಿಯರಾಗಿದ್ದರು.

ಜೋಕಟ್ಟೆ ಹೊಸ ಜುಮಾ ಮಸೀದಿಯಲ್ಲಿ ಹಲವಾರು ವರ್ಷಗಳ ಕಾಲ ಕಾರ್ಯದರ್ಶಿ ಮತ್ತು ಕಾರ್ಯಕಾರಣಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)