varthabharthi


ರಾಷ್ಟ್ರೀಯ

ನಕಲಿ ಸುದ್ದಿಯಿಂದ ಗಾಬರಿಗೊಂಡು ವಲಸೆ ಕಾರ್ಮಿಕರು ತಾಯ್ನಾಡಿಗೆ ಹಿಂದಿರುಗಿದರು: ಲೋಕಸಭೆಗೆ ತಿಳಿಸಿದ ಗೃಹ ಸಚಿವಾಲಯ

ವಾರ್ತಾ ಭಾರತಿ : 15 Sep, 2020

ಹೊಸದಿಲ್ಲಿ, ಸೆ. 15: ಲಾಕ್‌ಡೌನ್ ಸಂದರ್ಭದ ನಕಲಿ ಸುದ್ದಿಯಿಂದ ಗಾಬರಿಗೊಂಡ ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ತಾಯ್ನಾಡಿಗೆ ಹಿಂದಿರುಗಿದ್ದರು ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಲೋಕಸಭೆಗೆ ತಿಳಿಸಿದೆ.

 ಲಾಕ್‌ಡೌನ್ ಘೋಷಿಸಿದ ಕೂಡಲೇ ದೊಡ್ಡ ನಗರಗಳಿಂದ ಸಾವಿರಾರು ವಲಸೆ ಕಾರ್ಮಿಕರು ತಮ್ಮ ತವರೂರಿಗೆ ನಡೆದುಕೊಂಡು ಹೋಗಿರುವ ಬಗ್ಗೆ ಕಾರಣ ಕೋರಿದ ತೃಣಮೂಲ ಕಾಂಗ್ರೆಸ್ ಸಂಸದೆ ಮಾಲಾ ರಾಯ್ ಚುಕ್ಕಿ ರಹಿತ ಪ್ರಶ್ನೆಗೆ ಕೇಂದ್ರ ಗೃಹ ಸಚಿವಾಲಯ ಈ ಪ್ರತಿಕ್ರಿಯೆ ನೀಡಿತು.

ಲಾಕ್‌ಡೌನ್ ಅವಧಿಗೆ ಸಂಬಂಧಿಸಿದ ನಕಲಿ ಸುದ್ದಿಗಳಿಂದ ಗಾಬರಿಗೊಂಡ ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ತವರೂರಿಗೆ ತೆರಳಿದರು. ಜನರು ಮುಖ್ಯವಾಗಿ ವಲಸೆ ಕಾರ್ಮಿಕರು ಆಹಾರ, ಕುಡಿಯುವ ನೀರು, ಆರೋಗ್ಯ ಸೇವೆಗಳು ಹಾಗೂ ವಸತಿಯಂತಹ ಮೂಲಭೂತ ಸೌಕರ್ಯಗಳ ಸಾಕಷ್ಟು ಪೂರೈಕೆ ಬಗ್ಗೆ ಆತಂಕಗೊಂಡಿದ್ದರು ಎಂದು ಕೇಂದ್ರದ ಸಹಾಯಕ ಸಚಿವ ನಿತ್ಯಾನಂದ ರಾಯ್ ತಿಳಿಸಿದರು. ಲಾಕ್‌ಡೌನ್ ಸಂದರ್ಭ ತಮ್ಮ ತಯ್ನಾಡಿಗೆ ತಲುಪಲು ಪ್ರಯತ್ನಿಸಿದ ಸಂದರ್ಭ ರಸ್ತೆಯಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಮಾಹಿತಿ ಕೇಂದ್ರ ಸರಕಾರದಲ್ಲಿ ಇಲ್ಲ ಎಂದು ಸಚಿವರು ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)