varthabharthi


ಕರಾವಳಿ

ಭಟ್ಕಳ ಜಾಲಿ‌ ಬೀಚ್ ಬಳಿ ಅಕ್ರಮ ಗಾಂಜಾ ಮಾರಾಟ : ನಾಲ್ವರ ಬಂಧನ

ವಾರ್ತಾ ಭಾರತಿ : 15 Sep, 2020

ಭಟ್ಕಳ : ತಾಲೂಕಿ ಜಾಲಿ‌ ಬೀಚ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿತರನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.

ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಾಲಿ ಬೀಚ್ ಹತ್ತಿರ ಸೆ.15ರಂದು ಸಂಜೆ ಎರಡು ವಾಹನಗಳಲ್ಲಿ ಮಾರಾಟ ಮಾಡಲು ಉದ್ದೇಶದಿಂದ ನಿಂತುಕೊಂಡಿದ್ದಾಗಿ ತಿಳಿದು ಬಂದಿದ್ದು ಖಚಿತ ಮಾಹಿತಿ ದೊರೆಯುತ್ತಿದ್ದಂತೆ ಎಸ್.ಪಿ ಶಿವಪ್ರಕಾಶ ದೇವರಾಜ ಹಾಗೂ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಬದ್ರೀನಾಥ್, ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಅರವಿಂದ ಕಲ್ಲಗುಜ್ಜಿ ಹಾಗೂ ಸಿ.ಪಿ.ಐ.ದಿವಾಕರ ಮುಂದಾಳತ್ವದಲ್ಲಿ ಈ ಪ್ರಕರಣವನ್ನು ಭೇದಿಸುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳಾದ ಸೈಯದ್ ಅಕ್ರಮ, ಹಳೆ ಬಸ್ ನಿಲ್ದಾಣದ ಹತ್ತಿರ ಹಾಗೂ ಸೈಯದ್ ಮೂಸಾ ಹನಿಪಾಬಾಧ, ರೂಪೇಶ  ಮೊಗೇರ ಜಾಲಿ ದೇವಿ ನಗರ, ಮತ್ತು ಹೇಮಂತ ನಾಯ್ಕ ಹೆಬಳೆ ಗಾಂದಿ ನಗರ ನಿವಾಸಿ ಆಗಿದ್ದು, ಬಂಧಿತ ಆರೋಪಿಗಳಾಗಿದ್ದು ಸದರಿ ಆರೋಪಿತರಿಗೆ ದಸ್ತಗೀರ ಮಾಡಿ ಆರೋಪಿತರಿಂದ ಗಾಂಜಾ, 1 ಬೈಕ್- 2 ಮೊಬೈಲ್ ಫೋನ್ ಮತ್ತು ನಗದು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)