varthabharthi


ರಾಷ್ಟ್ರೀಯ

ಸುರೇಶ್ ರೈನಾ ಕುಟುಂಬಸ್ಥರ ಮೇಲೆ ದಾಳಿ ನಡೆಸಿದ ಗ್ಯಾಂಗ್‌ನ ಮೂವರ ಬಂಧನ

ವಾರ್ತಾ ಭಾರತಿ : 16 Sep, 2020

ಚಂಡಿಗಡ, ಸೆ.16: ಕಳೆದ ತಿಂಗಳು ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಅವರ ಕುಟುಂಬ ಸದಸ್ಯರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಗ್ಯಾಂಗ್‌ನ ಮೂವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬುಧವಾರ ಹೇಳಿದ್ದಾರೆ.

ಆರೋಪಿಗಳು ಅಂತರ್-ರಾಜ್ಯ ದರೋಡೆ-ಅಪರಾಧಿಗಳ ಗ್ಯಾಂಗ್‌ಗೆ ಸೇರಿದವರಾಗಿದ್ದು, ಇತರ 11 ಸದಸ್ಯರು ಪರಾರಿಯಾಗಿದ್ದಾರೆ. ಅವರನ್ನು ಕೂಡ ಸೆರೆ ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಪಂಜಾಬ್ ಡಿಜಿಪಿ ದಿನಕರ್ ಗುಪ್ತಾ ತಿಳಿಸಿದ್ದಾರೆ.

  ಆಗಸ್ಟ್ 20 ರಂದು ದರೋಡೆಕೋರರ ಗುಂಪು ಪಠಾಣ್‌ಕೋಟ್‌ನಲ್ಲಿ 33 ವರ್ಷದ ಕ್ರಿಕೆಟಿಗ ರೈನಾ ಕುಟುಂಬದ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಈ ಘಟನೆಯಲ್ಲಿ ರೈನಾ ಅವರು ತನ್ನ ಚಿಕ್ಕಪ್ಪ ಹಾಗೂ ಸಹೋದರ ಸಂಬಂಧಿಯನ್ನು ಕಳೆದುಕೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)