varthabharthi


ಅಂತಾರಾಷ್ಟ್ರೀಯ

ಜಪಾನ್‌ನ ನೂತನ ಪ್ರಧಾನಿಯಾಗಿ ಯೋಶಿಹಿದೆ ಸುಗಾ ಆಯ್ಕೆ

ವಾರ್ತಾ ಭಾರತಿ : 16 Sep, 2020

ಟೋಕಿಯೊ, ಸೆ.16: ಲಿಬರಲ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಯೋಶಿಹಿದೆ ಸುಗಾ(71 ವರ್ಷ)ಜಪಾನ್ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ನಿರ್ಗಮನ ಪ್ರಧಾನಿ ಶಿಂಝೊ ಅಬೆ ಅವರಿಗೆ ಹಲವು ವರ್ಷಗಳಿಂದ ಆಪ್ತರಾಗಿರುವ ಹಾಗೂ ಸರಕಾರದ ನೀತಿ ನಿರೂಪಣೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಂಪುಟದ ಮಾಜಿ ಮುಖ್ಯ ಕಾರ್ಯದರ್ಶಿ ಯೋಶಿಹಿದೆ ಸುಗಾ ಅವರನ್ನು ಜಪಾನ್ ಸಂಸತ್ತು ಬುಧವಾರ ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿತು.

ಇದಕ್ಕೂ ಮೊದಲು ಬುಧವಾರ ಸಂಸತ್ತಿನ ಕೆಳಮನೆಯಲ್ಲಿ ಪ್ರಧಾನಿ ಆಯ್ಕೆಗೆ ಚುನಾವಣೆಯಲ್ಲಿ ಒಟ್ಟು 462 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಯೋಶಿಹಿದೆ ಸುಗಾ ಅವರು 314 ಮತಗಳನ್ನು ಪಡೆಯುವ ಮೂಲಕ ಸುಲಭವಾಗಿ ಆಯ್ಕೆಯಾದರು.

‘‘ಫಲಿತಾಂಶದ ಪ್ರಕಾರ ಯೋಶಿಹಿದೆ ಸುಗಾ ಅವರನ್ನು ಜಪಾನ್‌ನ ನೂತನ ಪ್ರಧಾನಿಯಾಗಿ ಆಯ್ಕೆ ಮಾಡಲು ಸಂಸತ್ತು ನಿರ್ಧರಿಸಿದೆ’’ ಎಂದು ಸಂಸತ್ತಿನ ಕೆಳಮನೆಯ ಸಭಾಧ್ಯಕ್ಷ ಶಿಮಾ ತಿಳಿಸಿದರು.

ಶಿಂಝೊ ಅಬೆ ಅವರು ಅನಾರೋಗ್ಯದ ಕಾರಣ ಕಳೆದ ತಿಂಗಳು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಉತ್ತರಾಧಿಕಾರಿಯ ಆಯ್ಕೆ ನಡೆದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)