ಫ್ರೆಂಚ್ ಓಪನ್: ಡೇವಿಡ್ ಗೋಫಿನ್ಗೆ ಸೋಲುಣಿಸಿದ ಜಾನಿಕ್ ಸಿನ್ನರ್
ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಇಟಲಿಯ ಯುವ ಆಟಗಾರ
ಪ್ಯಾರಿಸ್, ಸೆ.28: ಇಟಲಿಯ ಯುವ ಆಟಗಾರ ಜಾನಿಕ್ ಸಿನ್ನರ್ ಫ್ರೆಂಚ್ ಓಪನ್ನ ಮೊದಲ ಪಂದ್ಯದಲ್ಲಿ 11ನೇ ಶ್ರೇಯಾಂಕದ ಡೇವಿಡ್ ಗೋಫಿನ್ಗೆ 7-5, 6-0, 6-3 ಸೆಟ್ಗಳಿಂದ ಸೋಲುಣಿಸುವ ಮೂಲಕ ಗಮನ ಸೆಳೆದಿದ್ದಾರೆ.
ರವಿವಾರ ಆರಂಭಗೊಂಡ ಫ್ರೆಂಚ್ ಓಪನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಕಳೆದ ವರ್ಷದ ನೆಕ್ಸ್ಟ್ ಜೆನ್ ಎಟಿಪಿ ಫೈನಲ್ಸ್ ಪ್ರಶಸ್ತಿಯನ್ನು ಜಯಿಸಿದ್ದ 19ರ ಹರೆಯದ ಜಾನಿಕ್ ಆರಂಭಿಕ ಸೆಟ್ನಲ್ಲೇ ತನ್ನ ಬೆಲ್ಜಿ ಯಂ ಎದುರಾಳಿ ಗೋಫಿನ್ಗೆ ಆಘಾತ ನೀಡಿದರು. ಗೋಫಿನ್ಗೆ ಬಳಿಕ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಮುಂದಿನ ಪಂದ್ಯದಲ್ಲಿ ಜಾನಿಕ್ ಅವರು ಮುಂದೆ ಫ್ರೆಂಚ್ ಕ್ವಾಲಿಫೈರ್ ಬೆಂಜಮಿನ್ ಬೊಂಜಿ ಅಥವಾ ಫಿನ್ಲ್ಯಾಂಡ್ನ ಎಮಿಲ್ ರುಸುವುವೊರಿಯನ್ನು ಎದುರಿಸಲಿದ್ದಾರೆ.
Next Story