ಇಸ್ರೇಲ್ ಸೇನೆಯ ತುಕಡಿ ಮೇಲೆ ನಿರ್ಬಂಧ ವಿಧಿಸಲು ಅಮೆರಿಕ ಚಿಂತನೆ
ವಾಷಿಂಗ್ಟನ್: ಪಶ್ಚಿಮ ದಂಡೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಇಸ್ರೇಲ್ ಸೇನೆಯ ತುಕಡಿಯ ಮೇಲೆ ನಿರ್ಬಂಧ ಜಾರಿಗೆ ಅಮೆರಿಕ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ. ಈ ಕ್ರಮ ಅಸಂಬದ್ಧತೆಯ ಉತ್ತುಂಗ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯಿಸಿದ್ದಾರೆ.
`ಪಶ್ಚಿಮದಂಡೆಯಲ್ಲಿ ಹಿಂಸಾತ್ಮಕ ಘಟನೆಗಳಲ್ಲಿ ಪಾಲ್ಗೊಂಡಿರುವ ಇಸ್ರೇಲ್ನ ತುಕಡಿಯೊಂದಕ್ಕೆ ಮಿಲಿಟರಿ ನೆರವು ಕಡಿತಗೊಳಿಸಲು ಅಮೆರಿಕ ಸರಕಾರ ನಿರ್ಧರಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ನೀವು ಶೀಘ್ರದಲ್ಲೇ ಫಲಿತಾಂಶಗಳನ್ನು ನೋಡಬಹುದು. ನಾನು ನಿರ್ಣಯಗಳನ್ನು ಮಾಡಿಯಾಗಿದೆ. ಮುಂದಿನ ದಿನಗಳಲ್ಲಿ ನೀವು ಅವುಗಳನ್ನು ನಿರೀಕ್ಷಿಸಬಹುದು ಎಂದರು.
Next Story