ಗೂಡ್ಸ್ ರೈಲಿನ ಗಾಲಿಗಳ ನಡುವೆ ಕುಳಿತು ಪ್ರಯಾಣಿಸಿದ ಬಾಲಕನ ರಕ್ಷಣೆ ಮಾಡಿದ ಆರ್ ಪಿ ಎಫ್!
PC : X \ @fpjindia
ಹರ್ದೋಯಿ (ಉತ್ತರ ಪ್ರದೇಶ): ರೈಲ್ವೇ ನಿಲ್ದಾಣದ ಸಮೀಪದಲ್ಲಿ ವಾಸಿಸುತ್ತಿದ್ದ ಬಾಲಕನೊಬ್ಬ, ನಿಂತಿದ್ದ ಗೂಡ್ಸ್ ರೈಲಿನ ಗಾಲಿಗಳ ಮಧ್ಯೆ ಕುಳಿತು ಆಟವಾಡುತ್ತಿದ್ದಾಗ, ರೈಲು ಚಲಿಸಿದ ಪರಿಣಾಮ 100 ಕೀ.ಮೀ. ದೂರ ಗಾಲಿಗಳ ಮಧ್ಯೆ ಕುಳಿತು ಪ್ರಯಾಣಿಸಿದ ಪವಾಡ ಸದೃಶ ಘಟನೆ ಉತ್ತರ ಪ್ರದೇಶದ ಹರ್ದೋಯಿನಲ್ಲಿ ನಡೆದಿದೆ ಎಂದು freepressjournal.com ವರದಿ ಮಾಡಿದೆ.
ರೈಲು ಚಲಿಸುವುದು ಭಾಸವಾದಾಗ ಬಾಲಕ ರೈಲಿನಿಂದ ಇಳಿಯಲಾಗದೇ ಗಾಲಿಗಳ ಮಧ್ಯೆ ಕುಳಿತು ಸಾಗಿದ್ದಾನೆ. ಬಿಸಿಲಿನ ಬೇಗೆಗೆ, ಬಾಲಕ ದೇಹಕ್ಕೆ ಮಸಿ ಮೆತ್ತಿಕೊಂಡಿದೆ. ಹರ್ದೋಯಿ ನಲ್ಲಿ ರೈಲು ನಿಂತಾಗ ಬಾಲಕನನ್ನು ಆರ್ ಪಿ ಎಫ್ ಸಿಬ್ಬಂದಿಯೋರ್ವರು ಗಮನಿಸಿದ್ದಾರೆ. ಬಳಿಕ ಅಸಹಾಯಕ ಬಾಲಕನನ್ನು ರಕ್ಷಿಸಿದ್ದಾರೆ. ಬಾಲಕನನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
Next Story