ಮುಂಬೈ: ಮತ್ತೆ ಮಹಾಮಳೆ
ಮುಂಬೈಯಲ್ಲಿ ಮಂಗಳವಾರ ಮಧ್ಯಾಹ್ನದಿಂದ ಭಾರೀ ಮಳೆಯಾಗುತ್ತಿದ್ದು, ಇದು ದಶಕದಲ್ಲೇ ನಿರಂತರ 24 ಗಂಟೆ ಸುರಿದ ಭಾರೀ ಮಳೆಯಾಗಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿದ್ದು ವಿಮಾನ ಸಂಚಾರ ಹಾಗೂ ರಸ್ತೆ ಸಂಚಾರ ವ್ಯತ್ಯಯಗೊಂಡಿದೆ. ಇನ್ನೊಂದೆಡೆ 183 ಪ್ರಯಾಣಿಕರಿದ್ದ ಸ್ಪೈಸ್ ಜೆಟ್ನ ಬೋಯಿಂಗ್ ವಿಮಾನ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭ ಮಳೆಗೆ ನೆಲ ತೊಯ್ದಿದ್ದರಿಂದ ಜಾರಿ ಕೆಸರಿನಲ್ಲಿ ಸಿಲುಕಿಕೊಂಡಿತು.
Next Story