ಇರಾನ್-ಇರಾಕ್ ಗಡಿ ಸಮೀಪ ಭೂಕಂಪ
ಇರಾಕ್ ಗಡಿಯಲ್ಲಿರುವ ಇರಾನ್ನ ಕೆರ್ಮಾನ್ಶಾ ಪ್ರಾಂತದಲ್ಲಿ ರವಿವಾರ ತಡರಾತ್ರಿ ಸಂಭವಿಸಿದ 7.3 ತೀವ್ರತೆಯ ಭೂಕಂಪದಿಂದ ಕನಿಷ್ಠ 414 ಜನರು ಸಾವನ್ನಪ್ಪಿದ್ದಾರೆ ಹಾಗೂ 6,500ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೆರ್ಮಾನ್ಶಾ ಪ್ರಾಂತದಲ್ಲಿರುವ ಕೋರೋನರ್ಸ್ ಕಚೇರಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಐಎಸ್ಎನ್ಎ ಉಲ್ಲೇಖಿಸಿದೆ. ಭೂಕಂಪದಿಂದ 414 ಮಂದಿ ಮೃತಪಟ್ಟಿದ್ದಾರೆ ಹಾಗೂ 6,500ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಇರಾನ್ನ ಅಧಿಕಾರಿಗಳು ತಿಳಿಸಿದ್ದಾರೆ.
Next Story