ಮಂಗಳೂರು: ದೇಶದ ಪ್ರಥಮ ಇನ್ಕ್ಯುಬೇಶನ್ ಸೆಂಟರ್ಗೆ ಚಾಲನೆ
ಮಂಗಳೂರಿನ ಕದ್ರಿಯ ಮಂಗಳೂರು ಮಹಾನಗರ ಪಾಲಿಕೆಯ ಉಪ ಕಚೇರಿ ಕಟ್ಟಡದಲ್ಲಿ ದೇಶದ ಪ್ರಥಮ ಇನ್ಕ್ಯುಬೇಶನ್ ಸೆಂಟರ್ಗೆ ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಜೆ.ಆರ್. ಲೋಬೋ, ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕೆಸಿಸಿಐ ಅಧ್ಯಕ್ಷೆ ವತಿಕಾ ಪೈ, ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಗಣೇಶ್ ಕಾರ್ಣಿಕ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ವಾಗತಿಸಿದರು. ಕೆಸಿಸಿಐನ ಮಾಜಿ ಅಧ್ಯಕ್ಷ ಜೀವನ್ ಸಲ್ದಾನಾ ಕಾರ್ಯಕ್ರಮ ನಿರೂಪಿಸಿದರು
Next Story