ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಜಗತ್ತಿನ ಅತೀ ಉದ್ದದ ಝಿಪ್ ಲೈನ್ (ಎರಡು ಬೆಟ್ಟಗಳ ನಡುವಿನ ಕಣಿವೆ ದಾಟಲು ಬಳಸುವ ತಂತಿ) ಗುರುವಾರ ಆರಂಭಗೊಂಡಿದೆ. 2.83 ಕಿ.ಮೀ. ಉದ್ದದ ಝಿಪ್ ಲೈನ್ ಜಗತ್ತಿನ ಅತೀ ಉದ್ದದ ತಂತಿ ಎಂಬುದಾಗಿ ಗಿನ್ನೆಸ್ ವಿಶ್ವ ದಾಖಲೆಗಳ ಅಧಿಕಾರಿಗಳು ಉದ್ಘಾಟನೆಗೊಂಡ ದಿನವೇ ಪ್ರಮಾಣಪತ್ರ ನೀಡಿದ್ದಾರೆ.