ಸೇನಾ ವಿಮಾನ ಪತನ...
ಅಲ್ಜೀರಿಯದ ರಾಜಧಾನಿ ಅಲ್ಜೀರ್ಸ್ ಸಮೀಪ ಸೇನಾ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಕನಿಷ್ಠ 257 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ಸೇನಾ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರೆಂದು ರಕ್ಷಣಾ ಸಚಿವಾಲಯ ತಿಳಿಸಿದೆ. ದುರಂತದಲ್ಲಿ ಕೆಲವರು ಬದುಕುಳಿದಿದ್ದು, ಗಂಭೀರ ಸುಟ್ಟಗಾಯಗಳಾದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನತದೃಷ್ಟ ವಿಮಾನವು ಬುಧವಾರ ಬೆಳಗ್ಗೆ ಅಲ್ಜೀರ್ಸ್ ನಗರದಿಂದ ಪಶ್ಚಿಮ ಸಹಾರಾದ ಗಡಿಪ್ರದೇಶದ ನಗರವಾದ ಟಿನ್ಡೌಫ್ಗೆ ಪ್ರಯಾಣಿಸುತ್ತಿದ್ದಾಗ ಅಪಘಾತಕ್ಕೀಡಾಗಿದೆ.
Next Story