ಸುಶೀಲ್ಗೆ ‘ಹ್ಯಾಟ್ರಿಕ್’ ಚಿನ್ನ
ಭಾರತದ ಹಿರಿಯ ಕುಸ್ತಿಪಟು ಸುಶೀಲ್ಕುಮಾರ್ ಗೋಲ್ಡ್ಕೋಸ್ಟ್ನಲ್ಲಿ ನಡೆಯು ತ್ತಿರುವ ಕಾಮನ್ವೆಲ್ತ್ ಗೇಮ್ಸ್ನ ಪುರುಷರ 74 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಕಾಮನ್ವೆಲ್ತ್ನಲ್ಲಿ ‘ಹ್ಯಾಟ್ರಿಕ್’ ಚಿನ್ನ ಜಯಿಸಿದ ಸಾಧನೆ ಮಾಡಿದ್ದಾರೆ. 2010ರ ದಿಲ್ಲಿ ಗೇಮ್ಸ್ನಲ್ಲಿ 66 ಕೆ.ಜಿ. ತೂಕ ವಿಭಾಗ, 2014ರ ಗ್ಲಾಸ್ಗೋ ಗೇಮ್ಸ್ನಲ್ಲೂ 74 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸಿದ್ದ ಸುಶೀಲ್ ಈಗ ಹ್ಯಾಟ್ರಿಕ್ ಪೂರೈಸಿದ್ದಾರೆ.
Next Story