‘ರಾಷ್ಟ್ರಗಳ ಯುದ್ಧ’ದ 205ನೇ ವಾರ್ಷಿಕ ದಿನ
ಜರ್ಮನಿಯ ಲೀಪ್ಝಿಗ್ ಸಮೀಪ ಶನಿವಾರ ‘ರಾಷ್ಟ್ರಗಳ ಯುದ್ಧ’ದ 205ನೇ ವಾರ್ಷಿಕ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಂದಿನ ಯುದ್ಧದ ಮಾದರಿಯನ್ನು ಪ್ರದರ್ಶಿಸಲಾಯಿತು. 1813 ಅಕ್ಟೋಬರ್ 19ರಂದು ನಡೆದ ಆ ಯುದ್ಧದಲ್ಲಿ ರಶ್ಯ, ಪ್ರಶ್ಯ, ಆಸ್ಟ್ರಿಯ ಮತ್ತು ಸ್ವೀಡನ್ ದೇಶಗಳ ಮಿತ್ರಕೂಟವು ನೆಪೋಲಿಯನ್ನ ಫ್ರಾನ್ಸ್ ಸೇನೆಯ ವಿರುದ್ಧ ಹೋರಾಡಿದವು. ಆ ಯುದ್ಧದಲ್ಲಿ ನೆಪೋಲಿಯನ್ ಸೇನೆ ಹಿಮ್ಮೆಟ್ಟಿತು. ಅಂದು ನೆಪೋಲಿಯನ್ನ ಪತನ ಆರಂಭವಾಯಿತು.
Next Story