ಗೋರೆ ಹಬ್ಬ
ಚಾಮರಾಜನಗರ: ಗಡಿ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲ ತಾಲೂಕಿನ ತಾಳವಾಡಿ ಫಿರ್ಕಾಕ್ಕೆ ಸೇರಿದ ಗುಮುಟಾಪುರ ಗ್ರಾಮದಲ್ಲಿ ಶುಕ್ರವಾರ ನೆರೆದಿದ್ದ ಯುವಕರು ಗೋರೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಗ್ರಾಮದಲ್ಲಿರುವ ಕನ್ನಡಿಗರು ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಜನರು ಪರಸ್ಪರ ಸೆಗಣಿ ಮೈಮೇಲೆ ಎರಚಾಡಿಕೊಂಡು ಸಂಭ್ರಮಪಡುವುದು ಈ ಹಬ್ಬದ ವಿಶೇಷ.
Next Story