varthabharthi

ನೆಲ್ಸನ್ ಮಂಡೇಲಾ ನೆನಪು...

ದಕ್ಷಿಣ ಆಫ್ರಿಕ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬುಧವಾರ ವರ್ಣಭೇದ ವಿರೋಧಿ ಹೋರಾಟಗಾರ ದಿವಂಗತ ನೆಲ್ಸನ್ ಮಂಡೇಲಾ ಜೈಲುವಾಸ ಅನುಭವಿಸಿದ್ದ ಕೇಪ್‌ಟೌನ್‌ನ ರೊಬ್ಬೆನ್ ಐಲ್ಯಾಂಡಾನ್ ಕಾರಾಗೃಹವನ್ನು ಬುಧವಾರ ಸಂದರ್ಶಿಸಿದರು. ದ.ಆಫ್ರಿಕದ ಬಿಳಿಯ ಜನಾಂಗೀಯವಾದಿ ಸರಕಾರದ ಆಡಳಿತದಲ್ಲಿ ಮಂಡೇಲಾ ಅವರು ಒಟ್ಟು 27 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದು, ಅದರಲ್ಲಿ 18 ವರ್ಷಗಳನ್ನು ರೊಬ್ಬೆನ್ ಐಲ್ಯಾಂಡ್‌ನ ಕಾರಾಗೃಹದಲ್ಲಿ ಕಳೆದಿದ್ದರು. ಈ ಜೈಲನ್ನು ಈಗ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ.

Comments (Click here to Expand)