varthabharthi

ಶ್ರೀಲಂಕಾ: ಭೀಕರ ಸ್ಫೋಟ...

ಕೊಲಂಬೊ: ರವಿವಾರ ಈಸ್ಟರ್ ಸಂಭ್ರಮದಲ್ಲಿದ್ದ ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ವಿದೇಶಿಯರು ಸೇರಿದಂತೆ ಕನಿಷ್ಠ 215 ಜನರು ಸಾವನ್ನಪ್ಪಿದ್ದು, 450ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸರಿಸುಮಾರು ಏಕಕಾಲದಲ್ಲಿ ನಡೆದ ಈ ಬಾಂಬ್ ದಾಳಿಗಳು ಮೂರು ಚರ್ಚ್‌ಗಳು ಮತ್ತು ವಿದೇಶಿಯರು ಹೆಚ್ಚಾಗಿ ತಂಗುವ ಪಂಚತಾರಾ ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡಿದ್ದವು. ಈ ಭೀಕರ ಹತ್ಯಾಕಾಂಡದಿಂದಾಗಿ ಎಲ್‌ಟಿಟಿಇ ಜೊತೆಗಿನ ಬರ್ಬರ ನಾಗರಿಕ ಯುದ್ಧದ ಬಳಿಕ ದಶಕದ ಕಾಲ ದೇಶದಲ್ಲಿ ನೆಲೆಸಿದ್ದ ಶಾಂತಿಯು ನುಚ್ಚುನೂರಾಗಿದೆ.

Comments (Click here to Expand)