ಕುತ್ತಿಗೆ ಪಟ್ಟಿಯ ತಿಮಿಂಗಿಲ..!
ಕುತ್ತಿಗೆ ಪಟ್ಟಿ ಹೊಂದಿರುವ ಬಿಳಿ ಬಣ್ಣದ ‘ಬಿಲೂಗ’ ತಿಮಿಂಗಿಲವೊಂದನ್ನು ನಾರ್ವೆಯ ಮೀನುಗಾರರು ಪತ್ತೆಹಚ್ಚಿದ್ದಾರೆ. ಈ ಕುತ್ತಿಗೆ ಪಟ್ಟಿಯು ರಶ್ಯ ನಿರ್ಮಿತವೆಂಬುದಾಗಿ ಕಂಡುಬಂದಿದ್ದು, ತಿಮಿಂಗಿಲವು ರಶ್ಯದ ಸೇನಾ ನೆಲೆಯೊಂದರಿಂದ ತಪ್ಪಿಸಿಕೊಂಡು ಬಂದಿರಬಹುದು ಎಂಬ ಊಹಾಪೋಹಗಳು ಹಬ್ಬಿವೆ. ತಿಮಿಂಗಿಲದ ಇರುವಿಕೆಯು ನಾರ್ವೆಯಲ್ಲಿ ಭಯ ಹುಟ್ಟಿಸಿದೆ ಹಾಗೂ ತನಿಖೆಗೆ ಆದೇಶ ನೀಡಲಾಗಿದೆ ಎಂದು ‘ಐಟಿವಿ ನ್ಯೂಸ್’ ವರದಿ ಮಾಡಿದೆ.
Next Story