varthabharthi

ಫನಿ ಭೀತಿ...

ಫನಿ ಚಂಡ ಮಾರುತದಿಂದಾಗಿ ಪುರಿಯ ಸಮೀಪ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಮುದ್ರ ಕಿನಾರೆಯ ಗ್ರಾಮಗಳು ಹಾಗೂ ಒಳನಾಡಿನ ಜಿಲ್ಲೆಗಳ ಲಕ್ಷಾಂತರ ಜನರನ್ನು ಬಸ್ ಹಾಗೂ ಸಣ್ಣ ವಾಹನಗಳ ಮೂಲಕ ಒಡಿಶಾ ಸರಕಾರ ಸ್ಥಳಾಂತರಗೊಳಿಸಿದೆ. ಗಂಟೆಗೆ 170-180ರ ನಡುವಿನ ವೇಗದೊಂದಿಗೆ ಫನಿ ಚಂಡಮಾರುತ ಪುರಿಯತ್ತ ಸಾಗುತ್ತಿದೆ. ಬಾಲುಖಂಡದ ಸಮೀಪ ಶುಕ್ರವಾರ ಅಪರಾಹ್ನ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಫನಿ ಚಂಡ ಮಾರುತ ಗುರುವಾರ ಬೆಳಗ್ಗೆ 8:30ಕ್ಕೆ ಪುರಿಯ ದಕ್ಷಿಣ ನೈಋತ್ಯದಿಂದ 430 ಕಿ.ಮೀ. ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ 225 ಕಿ.ಮೀ. ದೂರದಲ್ಲಿ ಕೇಂದ್ರವನ್ನು ಹೊಂದಿರಲಿದೆ. ಒಡಿಶಾ ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಿಂದ ಕನಿಷ್ಠ 8 ಲಕ್ಷ ಜನರನ್ನು ತಾತ್ಕಾಲಿಕ ವಾಸ್ತವ್ಯ ಶಿಬಿರಗಳಿಗೆ ಗುರುವಾರ ಸಂಜೆ ಸ್ಥಳಾಂತರಗೊಳಿಸಲಾಗಿದೆ ಎಂದು ವಿಶೇಷ ಪರಿಹಾರ ಆಯುಕ್ತ ಬಿಷ್ಣುಪಾದ ಸೇಥಿ ಹೇಳಿದ್ದಾರೆ.

Comments (Click here to Expand)